ಉತ್ತರ ಕರ್ನಾಟಕದ ಸೊಗಡಿನ 'ಸೋಮು ಸೌಂಡ್ ಇಂಜಿನಿಯರ್' ಟೀಸರ್ ರಿಲೀಸ್

ಸೋಮು ಸೌಂಡ್ ಇಂಜಿನಿಯರ್ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಸ್ಯಾಂಡಲ್ ವುಡ್'ನಲ್ಲಿ ಸಧ್ಯ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ. 
 

First Published Oct 17, 2022, 3:11 PM IST | Last Updated Oct 17, 2022, 3:11 PM IST

ಕನ್ನಡದಲ್ಲಿ ತಿಥಿ ಅನ್ನುವ ಕಥೆಯ ಬಂದಿದ್ದು, ಅದರಲ್ಲಿ ಮಂಡ್ಯದ ಹಳ್ಳಿ ಸೊಗಡಿನ ಅಸಲಿ ಸತ್ಯವನ್ನು ಸಿನಿಮಾ ಹೇಳಿತ್ತು. ಅಂತಹ ಅಸಲಿ ಕಥೆಯ ಸಿನಿಮಾವೇ ಸೋಮು ಸೌಂಡ್ ಇಂಜಿನಿಯರ್. ಉತ್ತರ ಕರ್ನಾಟಕದ ಸೊಗಡು ಇರುವ ಈ ಸಿನಿಮಾವು, ಬಾಗಲಕೋಟೆ ಜಿಲ್ಲೆಯ ಹಳ್ಳಿಯೊಂದರಲ್ಲಿ ಚಿತ್ರೀಕರಣ ಆಗಿದೆ. ಈ ಸಿನಿಮಾಗೆ ದುನಿಯಾ ಸೂರಿಯ ಶಿಷ್ಯ ಅಭಿ ಆಕ್ಷನ್ ಕಟ್ ಹೇಳಿದ್ದು, ನಟ ಜಹಾಂಗೀರ್, ಯುವ ನಟ ಶ್ರೇಷ್ಠ ಹಾಗೂ ಯಶ್ ಶೆಟ್ಟಿ ಹಾಗೂ ಅಪೂರ್ವ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡಿದ್ದು, ಮಾಸ್ತಿ ಡೈಲಾಗ್ ಬರೆದುಕೊಟ್ಟಿದ್ದಾರೆ. ದೀಪು ಎಸ್. ಕುಮಾರ್ ಸಂಕಲನ ಮಾಡಿದ್ದಾರೆ. 

ಅವಕಾಶ ಸುಲಭವಾಗಿ ಸಿಕ್ಕಿತು, ನಂತರದ ಹಾದಿ ಭಯಾನಕ; ಸ್ಟಾರ್ ಕಿಡ್ಸ್ ಕಷ್ಟ ಬಿಚ್ಚಿಟ್ಟ ತುಷಾರ್ ಕಪೂರ್