Asianet Suvarna News Asianet Suvarna News

ಹೊಲದಲ್ಲಿ ಉಳುಮೆ ಮಾಡಿ ಭಗವಂತನಿಗೆ ಕೋಟಿ ನಮನ ಸಲ್ಲಿಸಿದ ನಟಿ ಶ್ರುತಿ

ಸ್ಯಾಂಡಲ್ ವುಡ್‌ನ ಹಿರಿಯ ನಟಿ ಶ್ರುತಿ ಸದ್ಯ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಶ್ರುತಿ ಹೊಲಕ್ಕಿಳಿದು ಉಳುಮೆ ಮಾಡಲು ಪ್ರಾರಂಭಿಸಿದ್ದಾರೆ. ತಾನು ಕೃಷಿ ಮಾಡುತ್ತಿರುವ ವಿಡಿಯೋವನ್ನು ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನಟಿ ಶ್ರುತಿ ಕೃಷಿಗೆ ಮಗಳು ಗೌರಿ ಮತ್ತು ತಾಯಂದಿರು ಕೂಡ ಸಾಥ್ ನೀಡಿದ್ದಾರೆ. 

 

ಸ್ಯಾಂಡಲ್ ವುಡ್‌ನ ಹಿರಿಯ ನಟಿ ಶ್ರುತಿ ಸದ್ಯ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಶ್ರುತಿ ಹೊಲಕ್ಕಿಳಿದು ಉಳುಮೆ ಮಾಡಲು ಪ್ರಾರಂಭಿಸಿದ್ದಾರೆ. ತಾನು ಕೃಷಿ ಮಾಡುತ್ತಿರುವ ವಿಡಿಯೋವನ್ನು ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನಟಿ ಶ್ರುತಿ ಕೃಷಿಗೆ ಮಗಳು ಗೌರಿ ಮತ್ತು ತಾಯಂದಿರು ಕೂಡ ಸಾಥ್ ನೀಡಿದ್ದಾರೆ. ನೇಗಿಲು ಹಿಡಿದು ಉಳುಮೆ ಮಾಡುತ್ತಿರುವ ವಿಡಿಯೋ ಶೇರ್ ಮಾಡಿರುವ ಶ್ರುತಿ, 'ನಾನೇ ಉತ್ತಿ ಬಿತ್ತಿ ಬೆಳೆಯಬೇಕೆಂಬುದು ನನ್ನ ಬಹುವರ್ಷದ ಆಸೆ. ಭಗವಂತನಿಗೆ ಕೋಟಿ ನಮನಗಳು' ಎಂದು ಬರೆದುಕೊಂಡಿದ್ದಾರೆ. ಶ್ರುತಿ ವಿಡಿಯೊಗೆ ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.