Asianet Suvarna News Asianet Suvarna News

ಕ್ರೇಜ್ ಸೃಷ್ಟಿಸಿದ 'ಕಬ್ಜ' ಟೈಟಲ್ ಸಾಂಗ್: ಉಪ್ಪಿಯ ಖದರ್ ನೋಡಿ ಫ್ಯಾನ್ಸ್ ಫಿದಾ

ಕಬ್ಜ ಸಿನಿಮಾ ಕಮಾಲ್ ಮಾಡುವುದಂತು ಗ್ಯಾರಂಟಿ, ಇದು ಸಿನಿಮಾದ ಮಾಸ್ ಸಾಂಗ್ ನೋಡಿದವರ ಘಂಟಾಘೋಷ. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
 

ಕಬ್ಜದ ಬಹುಭಾಷಾ ಟೈಟಲ್ ಸಾಂಗ್, ಸಂಗೀತ ಪ್ರಿಯರ ಮನ ಗೆಲ್ಲುವಲ್ಲಿ ಸಕ್ಸಸ್ ಆಗಿದೆ. ಕನ್ನಡ, ಹಿಂದಿ, ತೆಲುಗು, ಮಲೆಯಾಳಂ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾದ ಕಬ್ಜದ ಮಾಸ್ ಹಾಡು ಆಲ್ ಮೋಸ್ಟ್ ಎಲ್ಲಾ ಭಾಷೆಯಲ್ಲೂ ಜನ ಮೆಚ್ಚುಗೆ ಪಡೆಯುತ್ತಿದೆ. ಹಾಡು ಬಿಡುಗಡೆಯಾಗಿ 24 ಗಂಟೆಯಲ್ಲಿ ಬರೋಬ್ಬರಿ 9 ಮಿಲಿಯನ್ಸ್'ಗೂ ಅಧಿಕ ವೀಕ್ಷಣೆ ಪಡೆದಿದೆ. ಜೋಶ್ ತುಂಬುವ ಮ್ಯೂಸಿಕ್, ಪಕ್ಕಾ ರಾ ಲಿರಿಕ್ಸ್ ಜೊತೆ ಉಪ್ಪಿಯ ಖದರ್ ಮಿಕ್ಸ್ ಆಗಿ ಸಂಗೀತ ಪ್ರಿಯರ ಮನ ಗೆಲ್ಲುವಲ್ಲಿ ಪಾಸ್ ಆಗಿದೆ. ಯಾವ್ ಮಟ್ಟಕ್ಕೆ ಅಂದ್ರೆ 24 ಗಂಟೆಯಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಮೊದಲ ಕನ್ನಡದ ಹಾಡು ಕೆಜಿಎಫ್2 ಸಿನಿಮಾ ಹೆಸರಲ್ಲಿದೆ. ಕೆಜಿಎಫ್2 ಸಿನಿಮಾದ ತೂಫಾನ್ ಸಾಂಗ್ 24 ಗಂಟೆಯಲ್ಲಿ 4 ಮಿಲಿಯನ್ಸ್ ವೀವ್ಸ್ ಆಗಿತ್ತು. ಈಗ ಬಂದಿರೋ ಕಬ್ಜದ ಕನ್ನಡ ಹಾಡು 24 ಗಂಟೆಯಲ್ಲಿ 3.7 ಮಿಲಿಯನ್ಸ್ ವೀಕ್ಷಣೆ ಕಂಡಿದೆ.

ನೂರು ದಿನ ಪೂರೈಸಿದ 'ಗಂಧದ ಗುಡಿ': ಅಪ್ಪು ಹುಟ್ಟುಹಬ್ಬಕ್ಕೆ ರೀ ರಿಲೀಸ್?

Video Top Stories