Asianet Suvarna News Asianet Suvarna News

ಪ್ರಶಾಂತ್ ನೀಲ್​-ಜ್ಯೂ.ಎನ್​ಟಿಆರ್ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್: ಎರಡು ಪಾರ್ಟ್​ನಲ್ಲಿ ಬರಲಿದೆ ಸಿನಿಮಾ!

ಜ್ಯೂನಿಯರ್ ಎನ್​ಟಿಆರ್​ ಹಾಗು ಡೈರೆಕ್ಟರ್ ಪ್ರಶಾಂತ್ ನೀಲ್.. ಈ ಕಿಲಾಡಿ ಜೋಡಿ ಸಿನಿಮಾ ಬರುತ್ತಿದೆ ಅನ್ನೋ ಸುದ್ದಿ ಹಬ್ಬಿ ಎರಡು ವರ್ಷ ಆಗಿದೆ. ಆದ್ರೆ ಆ ಸಿನಿಮಾಗೆ ಇನ್ನು ಕಾಯಕಲ್ಪ ಆಗಿಲ್ಲ. ಸಿನಿಮಾ ಮಾಡೋದಕ್ಕೆ ಪೂಜೆ ಮಾಡಿಲ್ಲ ಹಣ್ಣುಕಾಯಿ ಒಡೆದಿಲ್ಲ.

First Published Mar 27, 2024, 12:36 PM IST | Last Updated Mar 27, 2024, 12:36 PM IST

ಜ್ಯೂನಿಯರ್ ಎನ್​ಟಿಆರ್​ ಹಾಗು ಡೈರೆಕ್ಟರ್ ಪ್ರಶಾಂತ್ ನೀಲ್.. ಈ ಕಿಲಾಡಿ ಜೋಡಿ ಸಿನಿಮಾ ಬರುತ್ತಿದೆ ಅನ್ನೋ ಸುದ್ದಿ ಹಬ್ಬಿ ಎರಡು ವರ್ಷ ಆಗಿದೆ. ಆದ್ರೆ ಆ ಸಿನಿಮಾಗೆ ಇನ್ನು ಕಾಯಕಲ್ಪ ಆಗಿಲ್ಲ. ಸಿನಿಮಾ ಮಾಡೋದಕ್ಕೆ ಪೂಜೆ ಮಾಡಿಲ್ಲ ಹಣ್ಣುಕಾಯಿ ಒಡೆದಿಲ್ಲ. ಆದ್ರೆ ಇಬ್ಬರ ಕಾಂಬಿನೇಷನ್​ನಲ್ಲಿ ಸಿನಿಮಾ ಬರುತ್ತೆ ಅನ್ನೋ ಟಾಕ್​ ಮಾತ್ರ ಆಗಾಗ ಬಿಸಿ ಬಿಸಿಯಾಗಿ ಸಿಗ್ತಾನೆ ಇರುತ್ತೆ. ಇದೀಗ ಈ ಜೋಡಿಯ ಸಿನಿಮಾ ಬಗ್ಗೆ ಮತ್ತೊಂದ್ ಬಿಗ್​ ಅಪ್ಡೇಟ್​​​​​ ಸಿಕ್ಕಿದೆ. ಪ್ರಶಾಂತ್ ನೀಲ್​​ ಟ್ರೆಂಡ್ ಮಾರ್ಕ್​ ಡೈರೆಕ್ಟರ್​. ಅದೇ ತರ ಜ್ಯೂ.ಎನ್​ಟಿಆರ್ ಟ್ರೆಂಡ್ ಸೆಟ್ ಆಕ್ಟರ್. ನೀಲ್ ಜ್ಯೂಎನ್​ಟಿಆರ್​ ಕಾಂಬಿನೇಷನ್​ನಲ್ಲಿ ಸಿನಿಮಾ ಬರುತ್ತೆ ಅಂದಾಗ್ಲೆ ಹತ್ತಾರು ಕತೆ ಕಾದಂಬರಿಗಳು ಹುಟ್ಟಿದ್ವು. ಈಗ ನಿರ್ದೇಶಕ ಪ್ರಶಾಂತ್ ನೀಲ್​-ಜ್ಯೂ,ಎನ್​ಟಿಆರ್ ಪಾರ್ಟ್​2 ಟ್ರೆಂಡ್​ ಹಿಂದೆ ಹೊರಟಿದ್ದಾರೆ ಅನ್ನೋ ಅಪ್ಡೇಟ್​ ಸಿಗುತ್ತಿದೆ. 

ಈ ಜೋಡಿ ಸಿನಿಮಾ ಎರಡು ಪಾರ್ಟ್​ನಲ್ಲಿ ಬರಲಿದೆ ಅಂತ ಟಾಕ್ ಟಾಲಿವುಡ್​​ನಿಂದ ಬಂದಿದೆ. ಈಗ ಭಾರತೀಯ ಚಿತ್ರರಂಗ ಬದಲಾಗಿದೆ. ಬಹುಕೋಟಿಯಲ್ಲಿ ಯಾವ್ದೇ ಸಿನಿಮಾ ಬಂದ್ರು ಅದು ಎರಡು ಪಾರ್ಟ್​ನಲ್ಲಿ ರಿಲೀಸ್ ಆಗುತ್ತಿವೆ. ಈ ಪಾರ್ಟ್​ 2 ಟ್ರೆಂಡ್ ಶಂಕುಸ್ಥಾಪನೆ ಮಾಡಿದ್ದು ಎಸ್​​​.ಎಸ್​ ರಾಜಮೌಳಿಯ. ಅದು  ಬಹುಬಲಿ ಸಿನಿಮಾದಿಂದ. ಸಿನಿ ಪ್ರೇಮಿಗಳಿಗೆ ಹೊಸ ತರದ ಸಿನಿಮಾ ಶೈಲಿಯ ರುಚಿ ತೋರಿಸಿದ ಸಿನಿಮಾ ಬಾಹುಬಲಿ. ಈ ಸಿನಿಮಾ ಎರಡು ಪಾರ್ಟ್​ನಲ್ಲಿ ಬಂದು ದೊಡ್ಡ ಕಮಾಯಿ ಮಾಡಿತ್ತು. ಇದೇ ನಂಬಿಕೆ ಮೇಲೆ ಕರ್ನಾಟಕ ಪ್ರೈಡ್​ ಪ್ರಶಾಂತ್ ನೀಲ್​ ಯಶ್​ ಜೊತೆ ಸೇರಿ ಕೆಜಿಎಫ್​ ಸಿನಿಮಾವನ್ನ ಎರಡು ಪಾರ್ಟ್​ನಲ್ಲಿ ತೆರೆಗೆ ತಂದ್ರು ಆ ಎರಡು ಪಾರ್ಟ್​ ಸೂಪರ್ ಹಿಟ್ ಆಯ್ತು. ಆ ಬಳಿಕ ಬಂದ ಪುಷ್ಪ ಸಿನಿಮಾ ಕೂಡ ಎರಡು ಪಾರ್ಟ್​ನಲ್ಲೇ ಬರುತ್ತಿದೆ.

ಸಲಾರ್​ ಕೂಡ ಪಾರ್ಟ್​2 ರಿಲೀಸ್ ಆಗಬೇಕಿದೆ. ನಮ್ಮ ಕನ್ನಡದ ಹೆಮ್ಮೆ ರಿಷಬ್ ಶೆಟ್ಟಿಯ ಕಾಂತಾರ ಎರಡನೇ ಪಾರ್ಟ್​ ಸಿದ್ಧವಾಗುತ್ತಿದೆ. ಹೀಗಾಗಿ ಈಗ ಚಿತ್ರರಂಗ ನಡೆಯುತ್ತಿರೋದೆ ಪಾರ್ಟ್​2 ಟ್ರೆಂಡ್​​ ಮೇಲೆ ಅನ್ನೋದಂತು ನಿಜ. ಜ್ಯೂನಿಯರ್ ಎನ್​ಟಿಆರ್ ಸಧ್ಯ ದೇವಾರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ 10ಕ್ಕೆ ದೇವಾರ ದರ್ಶನ ಆಗುತ್ತೆ. ಅತ್ತ ಕಡೆ ಪ್ರಶಾಂತ್ ನೀಲ್​ ಸಲಾರ್​​​ನ ಪಾರ್ಟ್​2 ವರ್ಕ್​ ಮಾಡುತ್ತಿದ್ದಾರೆ. ಇಬ್ಬರು ಈ ಸಿನಿಮಾಗಳಿಂದ ಫ್ರೀ ಆದ ಮೇಲೆ ತಮ್ಮ ಕಾಂಬಿನೇಷನ್​ ಸಿನಿಮಾ ವರ್ಕ್​ ಶುರು ಮಾಡುತ್ತಾರಂತೆ. ಒಟ್ಟು 10 ದೇಶಗಳಲ್ಲಿ ಈ ಸಿನಿಮಾ ಶೂಟಿಂಗ್ ಮಾಡೋದಕ್ಕೆ ಪ್ರಶಾಂತ್ ನೀಲ್​ ಟೀಂ ಲೊಕೇಷನ್ ಹಂಟಿಂಗ್ ಕೂಡ ಮಾಡಿಟ್ಟಿದ್ದಾರಂತೆ. ಹೀಗಾಗಿ ನೀಲ್ ಜ್ಯೂ,ಎನ್​ಟಿಆರ್ ಸಿನಿಮಾ ಮೇಲೆ ಇಬ್ಬರ ಫಾಲೋವರ್ಸ್​ಗೆ ಭಾರಿ ಕುತೂಹಲವಂತು ಇದೆ. 

Video Top Stories