ಸೊಂಟ ಹಿಡಿದು ಓಡಾಡುತ್ತಿರೋ ದರ್ಶನ್: ಕನಸು ನನಸು ಮಾಡೋ ಭರವಸೆ ಕೊಟ್ಟ ದಿ ಶೋ ಮ್ಯಾನ್

ದರ್ಶನ್​ ಅವರ ಬೆನ್ನು ನೋವಿನ ನಡುವೆಯೂ, ನಿರ್ದೇಶಕ ಪ್ರೇಮ್​ ಅವರು ದರ್ಶನ್​ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಧ್ರುವ ಸರ್ಜಾ ಜೊತೆಗಿನ ಭಿನ್ನಾಭಿಪ್ರಾಯದ ನಡುವೆಯೂ ಪ್ರೇಮ್​ ಈ ನಿರ್ಧಾರ ತೆಗೆದುಕೊಂಡಿರುವುದು ಗಮನಾರ್ಹ.

First Published Dec 26, 2024, 5:55 PM IST | Last Updated Dec 26, 2024, 5:55 PM IST

ನಟ ದರ್ಶನ್ ಗೆ ಬೆನ್ನು ಮೂಳೆ ಬೇನೆ ಬೆನ್ನು ಬಿದ್ದಿದೆ. ಚಿಕಿತ್ಸೆ ಪಡೆಯುತ್ತಿರೋ ದರ್ಶನ್ ಮೈಸೂರು ಫಾರ್ಮ್ ಹೌಸ್​ಗೆ ಶಿಫ್ಟ್ ಆಗಿದ್ದಾರೆ. ಈ ಕಡೆ ದರ್ಶನ್ ಮತ್ತೆ ಬಣ್ಣ ಹಚ್ಚೋದು ಯಾವಾಗ ಅನ್ನೋ ನಿರೀಕ್ಷೆಯಲ್ಲಿ ಅವರ ಹಿಂಬಾಲಕರಿದ್ದಾರೆ. ಈ ಮಧ್ಯೆ ದರ್ಶನ್ ಜೊತೆ ಸಿನಿಮಾ ಅನೌನ್ಸ್ ಮಾಡಿದ್ದ ದಿ ಶೋ ಮ್ಯಾನ್​ ಪ್ರೇಮ್ ಬಿಸಿ ಬಿಸಿ ಸುದ್ದಿಯೊಂದನ್ನ ಹಸಿ ಹಸಿಯಾಗಿರಲಿ ಅಂತ ಸಿನಿ ಮಾರ್ಕೆಟ್​​ಗೆ ಬಿಟ್ಟಿದ್ದಾರೆ.  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಟಕ್ಕೆ ಬಿದ್ರೆ ಯಾರನ್ನೂ ಕೇರ್ ಮಾಡೋಲ್ಲ. ದರ್ಶನ್ ವಿಷಯದಲ್ಲಂತು ಧ್ರುವ ನಿಗಿ ನಿಗಿ ಕೆಂಡ ಆಗಿದ್ದಾರೆ. ಇದಕ್ಕೆ ಕಾರಣ ಸರ್ಜಾ ಫ್ಯಾಮಿಲಿ ಮ್ಯಾಟರ್​ನಲ್ಲಿ ದರ್ಶನ್ ನಾಲಿಗೆ ಹರಿ ಬಿಟ್ಟಿದ್ರು ಅನ್ನೋದು ಗಾಂಧಿನಗರದ ಮಾತು. ದರ್ಶನ್ ಅನ್ನೋ ಹೆಸರೆತ್ತೋಕು ಧ್ರುವ ಹಿಂದೆ ಮುಂದೆ ಯೋಚ್ನೆ ಮಾಡ್ತಾರೆ. ದುಷ್ಟರನ್ನ ಕಂಡ್ರೆ ದೂರ ಇರು ಅನ್ನೋ ಹಾಗೆ ದರ್ಶನ್​ರಿಂದ ಧ್ರುವ ಅಂತರ ಕಾಯ್ದುಕೊಂಡಿದ್ದಾರೆ. ಆದ್ರೆ ಜೋಗಿ ಪ್ರೇಮ್​​ ಮಾತ್ರ ಧ್ರುವನ ಕೆಡಿ ಸಿನಿಮಾ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲೇ ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ ಅಂತ ಗಂಟಲು ಹರಿದುಕೊಂಡು ಹೇಳಿದ್ದಾರೆ. ಹಾಗಾದ್ರೆ ಕೆಡಿ ಪಾರ್ಟ್​2 ಕಥೆ ಏನು..? ಪ್ರೇಮ್ ಕೆಡಿ ಪಾರ್ಟ್​2 ಮಾಡೋದನ್ನ ಬಿಟ್ಟು ದರ್ಶನ್ ಸಿನಿಮಾ ಕೈಗೆತ್ತಿಕೊಳ್ಳುತ್ತಾರಾ ಅನ್ನೋ ಟಾಕ್​​ ಈಗ ಶುರುವಾಗಿದೆ. ಬಟ್ ಪ್ರೇಮ್ ಮಾತು ದರ್ಶನ್ ಫ್ಯಾನ್ಸ್​ಗಂತು ಶೆಡ್​​ನಲ್ಲಿ ಬಿರಿಯಾನಿ ತಿಂದಷ್ಟೆ ಖುಷಿಕೊಟ್ಟಿದೆ..ಈ ಬಗ್ಗೆ ಡಿಟೇಲ್‌ ಸ್ಟೋರಿ ಇಲ್ಲಿದೆ ನೋಡಿ...