ಐಶ್ವರ್ಯ ರೈ ಸಂಭಾವನೆ ಎಷ್ಟು.?: ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಟ್ಲಿ ದಂಪತಿ.!
ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸಿನಿಮಾಗಳಿಂದ ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ಟ್ರ್ಯಾಕ್‌ಗೆ ಮರಳಿದ್ದಾರೆ. ಎರಡು ಭಾಗದಲ್ಲಿ ಬಂದ ಈ ಸಿನಿಮಾಗೆ ನಟಿ ಐಶ್ವರ್ಯ ರೈ ಎಷ್ಟು ಸಂಭಾವನೆ ಪಡೆದಿದ್ದಾರೆ ಗೊತ್ತಾ.?
ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸಿನಿಮಾಗಳಿಂದ ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ಟ್ರ್ಯಾಕ್‌ಗೆ ಮರಳಿದ್ದಾರೆ. ಎರಡು ಭಾಗದಲ್ಲಿ ಬಂದ ಈ ಸಿನಿಮಾಗೆ ನಟಿ ಐಶ್ವರ್ಯ ರೈ ಎಷ್ಟು ಸಂಭಾವನೆ ಪಡೆದಿದ್ದಾರೆ ಗೊತ್ತಾ.? ಬರೋಬ್ಬರಿ 10 ಕೋಟಿ ಅಂತ ಟಾಲಿವುಡ್‌ನಲ್ಲಿ ಸುದ್ದಿ ಹರಿದಾಡ್ತಿದೆ.
ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಟ್ಲಿ ದಂಪತಿ: ತಮಿಳು ಚಿತ್ರರಂಗದ ಯುವ ನಿರ್ದೇಶಕ ಅಟ್ಲಿ ಕುಮಾರ್ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಪತ್ನಿ ಪ್ರಿಯಾ ಜೊತೆಗೆ ಹೆಜ್ಜೆ ಹಾಕಿ ತುಂಬಾನೇ ಖುಷಿಪಟ್ಟಿದ್ದಾರೆ. ಫ್ರಾನ್ಸ್‌ನಲ್ಲಿ ನಡೆಯುತ್ತಿರೋ ಚಿತ್ರೋತ್ಸವದಲ್ಲಿ ಎಲ್ಲ ಕಲಾವಿದರು ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ. ಅಟ್ಲಿ ದಂಪತಿ ಕಪ್ಪು ಬಣ್ಣದ ಉಡುಗೆ ತೊಟ್ಟು ಸಖತ್ ಆಗಿಯೇ ಮಿಂಚಿದ್ದಾರೆ. ಈ ದಂಪತಿ ಫೋಟೋಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ನಿರ್ಮಾಣಕ್ಕಿಳಿದ ರಾಮ್ ಚರಣ್: ಗ್ಲೋಬಲ್ ಸ್ಟಾರ್ ರಾಮ್ ಚರಣ್ ವಿ ಮೆಗಾ ಪಿಕ್ಚರ್ಸ್ ಮೂಲಕ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಯುವಿ ಕ್ರಿಯೇಷನ್ ವಿಕ್ರಮ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ. ಈ ಎರಡು ಸಂಸ್ಥೆಗಳ ಚೊಚ್ಚಲ ಪ್ಯಾನ್ ಇಂಡಿಯಾ ಚಿತ್ರ ವೀರ ಸಾವರ್ಕರ್ 140ನೇ ಜನ್ಮೋತ್ಸವದ ಶುಭ ಸಂದರ್ಭದಲ್ಲಿ ಘೋಷಣೆ ಮಾಡಲಾಗಿದೆ. ಪವರ ಪ್ಯಾಕ್ಡ್ ವಿಡಿಯೋ ಮೂಲಕ ರಾಮ್ ತಮ್ಮ ನಿರ್ಮಾಣದ ಚೊಚ್ಚಲ ಪ್ಯಾನ್ ಇಂಡಿಯಾ ಚಿತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರಕೊಟ್ಟಿದ್ದು, ದಿ ಇಂಡಿಯನ್ ಹೌಸ್ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಆಗಿ ನಿಖಿಲ್ ಸಿದ್ದಾರ್ಥ್ ನಟಿಸುತ್ತಿದ್ದಾರೆ. ಅನುಪಮ್ ಕೇರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.