ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತದ ನಟರ್ಯಾರು; ಈ ಲಿಸ್ಟ್‌ನಲ್ಲಿ ಇದ್ದಾರಾ ಯಶ್?
ಮುಂದಿನ ಸಿನಿಮಾ ಯಾವುದು ಎನ್ನುವ ಕ್ಯೂರಿಯಾಸಿಟಿ ಎಲ್ಲರಲ್ಲಿಯೂ ಇದೆ. ಈ ಮಧ್ಯೆ ಯಶ್ ಸಂಭಾವನೆ ಎಷ್ಟು? ಅತೀ ಹೆಚ್ಚು ಸಂಭಾವನೆ ಪಡೆಯೋ ನಟರಲ್ಲಿ ಯಶ್ ಕೂಡ ಸೇರಿದ್ದಾರಾ ಅನ್ನೋ ಚರ್ಚೆ ಆರಂಭವಾಗಿದೆ. ಆದ್ರೆ ಮೂಲಗಳ ಪ್ರಕಾರ ಯಶ್ ಸಂಭಾವನೆ ಪಡೆಯೋದನ್ನ ಬಿಟ್ಟುಬಿಟ್ಟಿದ್ದಾರೆ.
ಮುಂದಿನ ಸಿನಿಮಾ ಯಾವುದು ಎನ್ನುವ ಕ್ಯೂರಿಯಾಸಿಟಿ ಎಲ್ಲರಲ್ಲಿಯೂ ಇದೆ. ಈ ಮಧ್ಯೆ ಯಶ್ ಸಂಭಾವನೆ ಎಷ್ಟು? ಅತೀ ಹೆಚ್ಚು ಸಂಭಾವನೆ ಪಡೆಯೋ ನಟರಲ್ಲಿ ಯಶ್ ಕೂಡ ಸೇರಿದ್ದಾರಾ ಅನ್ನೋ ಚರ್ಚೆ ಆರಂಭವಾಗಿದೆ. ಆದ್ರೆ ಮೂಲಗಳ ಪ್ರಕಾರ ಯಶ್ ಸಂಭಾವನೆ ಪಡೆಯೋದನ್ನ ಬಿಟ್ಟುಬಿಟ್ಟಿದ್ದಾರೆ. ಯಶ್ ನಟಿಸೋ ಪ್ರತಿ ಸಿನಿಮಾದಲ್ಲಿಯೂ ಶೇರ್ ಪಡೆಯುತ್ತಾರಂತೆ. ಕೆಜಿಎಫ್ 2 ನಿಂದ ಯಶ್ ಅವರಿಗೆ 100ಕೋಟಿ ಶೇರ್ ಬಂದಿದೆ ಅನ್ನೋ ಮಾಹಿತಿ ಇದೆ. ಇನ್ನು ಕೆವಿಎನ್ ನಿರ್ಮಾಣದ ಮುಂದಿನ ಸಿನಿಮಾಗೂ ಯಶ್ ಶೇರ್ ರೀತಿಯಲ್ಲಿ ಸಂಭಾವನೆ ಪಡೆಯಲಿದ್ದಾರಂತೆ. ಇನ್ನು ನಟ ಅಜಿತ್, ವಿಜಯ್, ಮಹೇಶ್ ಬಾಬು, ಎನ್ ಟಿ ಆರ್, ಅಲ್ಲು ಅರ್ಜುನ್ ಹೆಸರಿಗಳಿವೆ. ಇನ್ನು ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸಹ ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಸೂಪರ್ ರಜನಿಕಾಂತ್ ಎಲ್ಲರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.