ಹೆಡ್‌ ಬುಷ್‌ ಪ್ರೀ- ರಿಲೀಸ್ ಕಾರ್ಯಕ್ರಮದಲ್ಲಿ ರಚಿತಾ, ರಮ್ಯಾ!

ಹೆಡ್‌ಬುಷ್ ಪ್ರೀ- ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಮ್ಯಾ ಮತ್ತು ರಚಿತಾ ರಾಮ್‌ ಭಾಗಿಯಾಗಲಿದ್ದು,  ದಾವಣಗೆರೆಯಲ್ಲಿ ಅಭಿಮಾನಿಗಳಿಂದ ಕಾರ್ಯಕ್ರಮಕ್ಕೆ ಸಿದ್ದತೆ ನಡೆಯುತ್ತಿದೆ.

First Published Oct 13, 2022, 3:54 PM IST | Last Updated Oct 13, 2022, 3:54 PM IST

ಡಾಲಿ ಧನಂಜಯ್‌ ನಟನೆಯ ಹೆಡ್‌ ಬುಷ್‌ ಚಿತ್ರದ ಪ್ರೀ ರಿಲೀಸ್‌ ಕಾರ್ಯಕ್ರಮ ಅ.16ರಂದು ದಾವಣಗೆರೆಯಲ್ಲಿ ನಡೆಯಲಿದ್ದು, ರಮ್ಯಾ ಹಾಗೂ ರಚಿತಾರಾಮ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈಗಾಗಲೇ ರೆಟ್ರೋ ಸ್ಟೈಲ್‌ನಲ್ಲಿ ಪ್ರಚಾರ ಶುರು ಮಾಡಿರುವ ಡಾಲಿ ಈಗ ದಾವಣಗೆರೆ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದಾರೆ.ದೊಡ್ಡಮಟ್ಟದಲ್ಲಿ ಸಿನಿಮಾವನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ಧನಂಜಯ್‌ನಿರತರಾಗಿದ್ದಾರೆ. ಹೆಡ್‌ ಬುಷ್‌ ಅ.21ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೆಡ್‌ಬುಷ್‌ ತಂಡಕ್ಕೆ ರಮ್ಯಾ ಮತ್ತುರಚ್ಚು ಸಾತ್ ನೀಡಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ