ಹನುಮಾನ್ ಮುಂದೆ ನಿಮ್ಮದೇನು ಇಲ್ಲ: ಡಾರ್ಲಿಂಗ್ ಪ್ರಭಾಸ್ ಕಾಲೆಳೆದ ನೆಟ್ಟಿಗರು!

ಆದಿಪುರುಷ್ ಕಳಪೆ ಗ್ರಾಫಿಕ್ಸ್ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ ‘ಹನು-ಮಾನ್’ ಸಿನಿಮಾದ ಟೀಸರ್. ಡಾರ್ಲಿಂಗ್ ಪ್ರಭಾಸ್‌ರ ಆದಿಪುರುಷ್ ಸಿನಿಮಾ 400 ಕೋಟಿ ಬಜೆಟ್‌ನಲ್ಲಿ ಸಿದ್ಧವಾಗಿದೆ. ಈ ಸಿನಿಮಾ ಗ್ರಾಫಿಕ್ಸ್‌ನಲ್ಲೇ ಹೆಚ್ಚು ವಿಜೃಂಭಿಸಲಿದೆ. 

First Published Nov 23, 2022, 12:31 PM IST | Last Updated Nov 23, 2022, 12:31 PM IST

ಟಾಲಿವುಡ್ ಡಾರ್ಲಿಂಗ್ ಪ್ರಭಾಸ್‌ಗೆ ಇತ್ತೀಚೆಗೆ ಯಾಕೋ ಟೈಂ ಸರಿ ಇಲ್ಲ ಅನ್ನಿಸುತ್ತಿದೆ. ಬಾಹುಬಲಿ ನಂತರ ಯಾವ ಸಿನಿಮಾಗಳೂ ಸಕ್ಸಸ್ ಆಗುತ್ತಿಲ್ಲ. ‘ಸಾಹೋ’, ‘ರಾಧೆ ಶ್ಯಾಮ್’ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ್ದಾಯ್ತು. ಈಗ ಬೆಳ್ಳಿತೆರೆ ಮೇಲೆ ಬರೋದಕ್ಕೆ ಸಿದ್ಧವಾಗಿರೋ ‘ಆದಿಪುರುಷ್’ ಸಿನಿಮಾದ್ದು ಅದೇ ಕಥೆ ಅಂತ ಟಾಕ್ ಶುರುವಾಗಿದೆ. ಇದಕ್ಕೆ ಕಾರಣ ಆದಿಪುರುಷ್‌ನಲ್ಲಿರೋ ಕೆಟ್ಟ ಗ್ರಾಫಿಕ್ಸ್. ಗ್ರಾಫಿಕ್ಸ್ ವಿಚಾರಕ್ಕೆ ಆದಿಪುರುಷ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇದೀಗ ಆದಿಪುರುಷ್ ಕಳಪೆ ಗ್ರಾಫಿಕ್ಸ್ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ ‘ಹನು-ಮಾನ್’ ಸಿನಿಮಾದ ಟೀಸರ್. ಡಾರ್ಲಿಂಗ್ ಪ್ರಭಾಸ್‌ರ ಆದಿಪುರುಷ್ ಸಿನಿಮಾ 400 ಕೋಟಿ ಬಜೆಟ್‌ನಲ್ಲಿ ಸಿದ್ಧವಾಗಿದೆ. ಈ ಸಿನಿಮಾ ಗ್ರಾಫಿಕ್ಸ್‌ನಲ್ಲೇ ಹೆಚ್ಚು ವಿಜೃಂಭಿಸಲಿದೆ. ಆದ್ರೆ 400 ಕೋಟಿ ಖರ್ಚು ಮಾಡಿದ್ರೆ ಏನ್ ಬಂತು. ಅಂತ್ಯಂತ ಕಳಪೆ ಗ್ರಾಫಿಕ್ಸ್ ಈ ಸಿನಿಮಾದಲ್ಲಿದೆ. 

ಆದಿಪುರುಷ್‌ಗಿಂತ ಹನುಮಾನ್ ಸಿನಿಮಾ ಗ್ರಾಫಿಕ್ಸ್ ವರ್ಕ್ಅನ್ನ ಒಮ್ಮೆ ನೋಡಿ ಅಂತ ಟ್ರೋಲ್ ಮಾಡಲಾಗುತ್ತಿದೆ. ಅಷ್ಟೆ ಅಲ್ಲ ರಾಮಾಯಣದಲ್ಲಿ ಬರೋ ಹನುಮನ ಕಥೆಗೆ ಫ್ಯಾಂಟಸಿ ಟಚ್ ಕೊಟ್ಟು ತೆಲುಗುನಲ್ಲಿ ಹನುಮಾನ್ ಸಿನಿಮಾ ಮಾಡಿದ್ದಾರೆ. ಈ ಸಿನಿಮಾಗೆ ಬರೀ 17 ಕೋಟಿ ಖರ್ಚಾಗಿದೆ. ಆದ್ರೆ ಗ್ರಾಫಿಕ್ಸ್‌ನಲ್ಲಿ ಹನುಮಾನ್‌ನನ್ನ ತೋರಿಸಿರೋದನ್ನ ನೋಡಿ ಪ್ರಭಾಸ್ರ ಆಧಿಪುರುಷ್‌ಗಿಂತ ಹನುಮಾನ್ ಟೀಸರ್ ಚೆನ್ನಾಗಿದೆ ಅಂತ ಟ್ರೋಲ್ ಮಾಡುತ್ತಿದ್ದಾರೆ. ಹನುಮಾನ್ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೊ ಹನುಮಾನ್ ಬಗ್ಗೆ ಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಾಯಕನಾಗಿ ತೇಜ ಸಜ್ಜ, ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದು, ಶರತ್ ಕುಮಾರ್, ವರಲಕ್ಷ್ಮಿ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಸದ್ಯ ಬಿಡುಗಡೆಯಾಗಿರುವ ಟೀಸರ್ ಎಲ್ಲರ ಗಮನ ಸೆಳೆದಿದ್ದು, 400 ಕೋಟಿಯ ಆದಿಪುರುಷ್‌ಗಿಂತ 17 ಕೋಟಿಗೆ ಹನುಮಾನ್ ಬೆಸ್ಟ್ ಅನ್ನೋ ಮಾತುಗಳು ಶುರುವಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment