ಸಾಯಿ ದುರ್ಗಾ ತೇಜ್‌ಗೆ ಟಾಲಿವುಡ್ ಸ್ಟಾರ್ ರಾಮ್ ಚರಣ್ ಸಾಥ್, ಸಿಕ್ಸ್ ಪ್ಯಾಕ್ ಜೊತೆ ಮೆಗಾ ಬಲ!

ತೆಲುಗು ನಟ ಸಾಯಿ ದುರ್ಗಾ ತೇಜ್ ನಟನೆಯ 'ಸಂಬರಾಲ ಏಟಿಗಟ್ಟು' ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದೆ. ಹೈದ್ರಾಬಾದ್ ನಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಬಿಡುಗಡೆ ಮಾಡಿದ್ದಾರೆ...

First Published Dec 22, 2024, 9:02 PM IST | Last Updated Dec 22, 2024, 9:02 PM IST

ತೆಲುಗು ನಟ ಸಾಯಿ ದುರ್ಗಾ ತೇಜ್ ನಟನೆಯ 'ಸಂಬರಾಲ ಏಟಿಗಟ್ಟು' ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದೆ. ಹೈದ್ರಾಬಾದ್ ನಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಬಿಡುಗಡೆ ಮಾಡಿದ್ದಾರೆ. ಆಕ್ಷನ್ ಪ್ಯಾಕ್ಡ್ ಸಂಬರಾಲ ಏಟಿಗಟ್ಟು ಟೀಸರ್‌ನಲ್ಲಿ ನಟ ಸಾಯಿ ದುರ್ಗಾ ತೇಜ್ ಸಿಕ್ಸ್ ಪ್ಯಾಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ. ಕಾರಣ, ಈ ಚಿತ್ರವು ಬಿಗ್ ಬಜೆಟ್ ಚಿತ್ರವಾಗಿರುವುದು ಮಾತ್ರವಲ್ಲ, ಬಹುತಾರಾಗಣವನ್ನು ಹೊಂದಿದೆ, ಜೊತೆಗೆ, ಈ ಚಿತ್ರಕ್ಕೆ ಭಾರೀ ಬಂಡವಾಳವನ್ನು ಸಹ ವ್ಯಯಿಸಿದ್ದು, ಚಿತ್ರವು ತಾಂತ್ರಿಕವಾಗಿ ಕೂಡ ಉತ್ತಮವಾಗಿ ಮೂಡಿಬಂದಿದೆ ಎನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..