ಸಲ್ಮಾನ್ ಖಾನ್ರನ್ನ ಕೊಲ್ಲುವುದೇ ನನ್ನ ಗುರಿ... ಸಲ್ಲುಗೆ ಮತ್ತೆ ಸಾವು ನೆನಪಿಸಿದ ಗ್ಯಾಂಗ್‌ಸ್ಟರ್ ಗೋಲ್ಡಿ

ರಾಷ್ಟ್ರೀಯ ಸುದ್ದಿ ವಾಹಿನಿಯ ಸಂದರ್ಶನದಲ್ಲಿ  ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.

First Published Jun 28, 2023, 11:45 AM IST | Last Updated Jun 28, 2023, 11:45 AM IST

ರಾಷ್ಟ್ರೀಯ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ‘ಇಂಡಿಯಾ ಟುಡೇ’ ನಡೆಸಿದ ಸಂದರ್ಶನದಲ್ಲಿ ಗ್ಯಾಂಗ್​ಸ್ಟರ್​ ಗೋಲ್ಡಿ ಬ್ರಾರ್​, ಸಲ್ಮಾನ್​ ಖಾನ್ ಹತ್ಯೆಯ ಪ್ಲ್ಯಾನ್​ ಬಹಿರಂಗ ಪಡಿಸಿದ್ದಾರೆ. ಸಲ್ಮಾನ್​ ಖಾನ್​ನನ್ನು ಕೊಲ್ಲುತ್ತೇವೆ. ಆತ ಬಿಷ್ಣೋಯ್​ ಸಮುದಾಯಕ್ಕೆ ಅವಮಾನ ಮಾಡಿದ್ದಾನೆ. ನಾವು ಪವಿತ್ರವೆಂದು ತಿಳಿಯುವ ಕೃಷ್ಣಮೃಗವನ್ನು ಸಾಯಿಸಿದ್ದಾನೆ. ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ ಅವನು ಇನ್ನೂ ಕ್ಷಮೆ ಕೇಳಿಲ್ಲ. ಸಲ್ಮಾನ್​ ಖಾನ್​ ಮಾತ್ರವಲ್ಲದೇ ನಮ್ಮ ಎಲ್ಲ ಶತ್ರುಗಳನ್ನೂ ನಾವು ಕೊಲ್ಲುತ್ತೇವೆ’ ಎಂದು ಗೋಲ್ಡಿ ಬ್ರಾರ್​ ಹೇಳಿದ್ದಾನೆ