ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೈಮಾ ಸಮಾರಂಭ; ರೇಸ್‌ನಲ್ಲಿರುವ ಕನ್ನಡ ಸಿನಿಮಾಗಳಿವು

ಸೈಮಾ ಹತ್ತನೇ ಅವೃತ್ತಿ ಸೆಪ್ಟಂಬರ್10 ಹಾಗೂ 11ರಂದು ಬೆಂಗಳೂರಿನಲ್ಲಿ ನಡಿತಿದೆ. ಆದರೆ ಈ ಬಾರಿ ಫಸ್ಟ್ ಟೈಂ ಸೈಮಾ ಅವಾರ್ಡ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದೆ. 

First Published Aug 22, 2022, 4:26 PM IST | Last Updated Aug 22, 2022, 4:26 PM IST

ಸೈಮಾ ಅವಾರ್ಡ್, ಬಣ್ಣದ ಜಗತ್ತಿಗೆ ಬಂದ ಪ್ರತಿಯೊಬ್ಬ ಕಲಾವಿದನಿಗು ಈ ಸೈಮಾ ಅವಾರ್ಡ್ ಅನ್ನು ಒಮ್ಮೆಯಾದ್ರು ಪಡೆದುಕೊಳ್ಳೇಕು ಅನ್ನೊ ಆಸೆ ಇರುತ್ತೆ. ಯಾಕಂದ್ರೆ ಈ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವೀ ಅವಾರ್ಡ್ಸ್‌ಗೆ ಬೇರೆಯಾದೇ ತೂಕವಿದೆ. ಈ ಪ್ರಶಸ್ತಿಯ ಹಬ್ಬಕ್ಕೆ ದಕ್ಷಿಣ ಭಾರತ ಚಿತ್ರರಂಗ ಸಜ್ಜಾಗಿದೆ. ವಿಶೇಷ ಅಂದ್ರೆ ಸೈಮಾ ಅವಾರ್ಡ್ ಕಾರ್ಯಕ್ರಮ ಈ ಭಾರಿ ನಮ್ಮ ಬೆಂಗಳೂರಿನಲ್ಲೇ ಆಗ್ತಿರೋದು ಸ್ಯಾಂಡಲ್ ವುಡ್ ಗೆ  ಸಿನಿ ಪ್ರೀಯರಿಗೆ ಮತ್ತೊಂದು ವಿಶೇಷ. ಸೈಮಾ ಅವಾರ್ಡ್ಸ್ ದಕ್ಷಿಣ ಭಾರತದ ಜನಪ್ರಿಯ ಚಿತ್ರಪ್ರಶಸ್ತಿಗಳಲ್ಲಿ ಒಂದು. ಈ ಸೈಮಾ ತನ್ನದೇ ಫ್ಯಾನ್‌ಬೇಸ್ ಹೊಂದಿದೆ. ಸೈಮಾ ಹತ್ತನೇ ಅವೃತ್ತಿ ಇದೇ ಸೆ.10 ಹಾಗೂ 11ರಂದು ಬೆಂಗಳೂರಿನಲ್ಲಿ ನಡಿತಿದೆ. ಸೈಮಾ ಒಂಭತ್ತು ಆವೃತ್ತಿಗಳು ಮುಗಿದ್ರು ಇದುವರೆಗೂ ಕರ್ನಾಟದಲ್ಲಿ ಒಂದೇ ಒಂದು ಬಾರಿಯೂ ಕಾರ್ಯಕ್ರಮ ನಡೆದಿಲ್ಲ. ಆದರೆ ಈ ಬಾರಿ ಫಸ್ಟ್ ಟೈಂ ಸೈಮಾ ಅವಾರ್ಡ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದೆ.