ಪ್ರಶ್ನೆ ಕೇಳಿ ಅಂದ್ರೆ ಕೇಳಬಾರದ್ದನ್ನೆಲ್ಲಾ ಕೇಳಿದ್ರು ಪೋಲಿ ಹೈಕ್ಳು: ಚಳಿ ಬಿಡಿಸಿದ ಬೋಲ್ಡ್ ಬ್ಯೂಟಿ

ಸೋಷಿಯಲ್ ಮೀಡಿಯಾದಲ್ಲಿ ಚೈತ್ರಾ ಆಚಾರ್ ಅವರಿಗೆ ಅಭಿಮಾನಿಗಳು ಕೇಳಿದ ಕಿರಿಕ್ ಪ್ರಶ್ನೆಗಳಿಗೆ ಚೈತ್ರಾ ಅವರು ನೀಡಿದ ಬೋಲ್ಡ್ ಉತ್ತರಗಳು ಸಾಕಷ್ಟು ಸದ್ದು ಮಾಡುತ್ತಿವೆ. ಮದುವೆ ಮತ್ತು ವೈಯಕ್ತಿಕ ವಿಚಾರಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಚೈತ್ರಾ ಖಡಕ್ ಆಗಿ ಉತ್ತರಿಸಿದ್ದಾರೆ.

First Published Dec 22, 2024, 4:41 PM IST | Last Updated Dec 22, 2024, 4:41 PM IST

ಸೌಂದರ್ಯದ ಸೊಬಗು.. ಎಲ್ಲೆಲ್ಲೂ ಇವರದ್ದೇ ಬೆಡಗು.. ಸಿನಿಮಾದಲ್ಲಿ ಮಾಡೋ ಪಾತ್ರಗಳು ಕಂಪ್ಲೀಟ್ ಡಿಫರೆಂಟು.. ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಕೇಳೋ ಪ್ರಶ್ನೆಗಳು ನೂರೆಂಟು.. ಅದ್ಯಾರು ಗೊತ್ತಾ.? ಒನ್ ಆ್ಯಂಡ್ ಓನ್ಲಿ ಚೈತ್ರ ಜೆ ಆಚಾರ್. ಚೈತ್ರ ಜೆ ಆಚಾರ್​.. ಮಹಿರಾ ಸಿನಿಮಾದಿಂದ ಸ್ಯಾಂಡಲ್​ವುಡ್​ಗೆ ಬಂದ ಬ್ಯೂಟಿ. ಅಭಿನಯದಲ್ಲಿ ಚೈತ್ರ ಟಾಪರ್​.. ಸಿಕ್ಕ ಪಾತ್ರಗಳನ್ನೆಲ್ಲಾ ಒಪ್ಪಿ ಅಪ್ಪಿಕೊಳ್ಳದೇ ನಟನೆಗೆ ಸ್ಕೋಪ್​ ಇರೋ ರೋಲ್​​​ಗಳನ್ನೇ ಮಾಡೋ ಈ ಕೃಷ್ಣ ಸುಂದರಿ ಸೋಷಿಯಲ್ ಮೀಡಿಯಾ ಫ್ರೀಕ್​ ಕೂಡ ಹೌದು. ಸೋಷಿಯಲ್ ಸಮುದ್ರದಲ್ಲಿ ಚೈತ್ರ ಜೆ ಆಚಾರ್ ಹಾಕೋ ಆ ದೃಶ್ಯಗಳು ಪಡ್ಡೆ ಹುಡುಗರ ಎದೆ ಝಲ್ ಎನಿಸಿದ್ದು ಇದೆ.
ಯೆಸ್, ಸಪ್ತ ಸಾಗರದಾಚೆ ಎಲ್ಲೋ ಸುರಭಿ ಅಲಿಯಾಸ್​ ಚೈತ್ರ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಪ್ರಶ್ನೆ ಕೇಳಿ ಉತ್ತರ ಕೊಡುತ್ತೇನೆ ಅಂದಿದ್ರು. ಚೈತ್ರ ಪ್ರಶ್ನೆ ಕೇಳಿ ಎನ್ನುತ್ತಿದ್ದಂತೆ ಬ್ಯಾಡ್​ ಬಾಯ್ಸ್​​​ ಕೇಳಬಾರದ್ದನ್ನೆಲ್ಲಾ ಕೇಳಿದ್ದಾರೆ. ಅದಕ್ಕೆ ಚೈತ್ರ ಬೋಲ್ಡ್​​ ಆಗೇ ಉತ್ತರ ಕೊಟ್ಟು ಪ್ರಶ್ನೆ ಕೇಳಿದವರನ್ನೇ ಬೌಲ್ಡ್​ ಮಾಡಿದ್ದಾರೆ. ಚೆಲುವೆ ಚೈತ್ರಗೆ ಹಸಿ ಬಿಸಿ ಪ್ರಶ್ನೆಗಳೇ ಬಂದಿವೆ. ನಿಮಗೆ ಮದುವೆ ಆಗಿದ್ಯಾ ಅಂತ ಕೇಳಿದವರಿಗೆ ಚೈತ್ರ ನನಗೆ ಒಂದು ಮದುವೆ, ಮೂರು ಡಿವೋರ್ಸ್​ ಆಗಿದೆ. ಈಗ್ಲು ಲೆಕ್ಕಾ ಹಾಕ್ತಿದ್ದೇನೆ ಎಂದಿದ್ದಾರೆ. ಮತ್ತೊಬ್ಬ ಪಡ್ಡೆ ನೀವು ಕೆಲಸ ಪಡೆಯೋದಕ್ಕೆ ನಿಮ್ಮ ಲೈಂಗಿಕಥೆ ಬಳಸಿದ್ದೀರಾ ಅಂತ ಮರ್ಯಾದೆ ಬಿಟ್ಟು ಕೇಳಿದ್ದಾನೆ. ಅಷ್ಟೆ ಅಲ್ಲ ಇನ್ನೊಬ್ಬ ಆಸಾಮಿ ನೀವು ನಿಮ್ಮ ವರ್ಜಿನಿಟಿ ಕಳೆದುಕೊಂಡಿದ್ದೀರಾ ಅಂತ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಪ್ರಶ್ನೆ ಕೇಳಿದವರ ಮೈ ಚಳಿ ಬಿಡೋ ಹಾಗೆ ಚೈತ್ರ ಉತ್ತರ ಕೊಟ್ಟಿದ್ದಾರೆ. ಎನಿ ವೇ ಚೈತ್ರ ಜೆ ಆಚಾರ್ ಸಿನಿಮಾದಲ್ಲಿ ಪಾತ್ರಗಳ ಆಯ್ಕೆಯಲ್ಲಿ ಎಷ್ಟು ಡೇರಿಂಗ್ ಆಗಿದ್ದಾರೋ ಹಾಗೆ ಸಿಟ್ಟು ನೆತ್ತಿಗೇರೋ ಪೋಲಿ ಪ್ರಶ್ನೆಗಳನ್ನ ಕೇಳಿದವರಿಗೆ ಉತ್ತರ ಕೊಡೋದರಲ್ಲೂ ಡೇರಿಂಗ್ ಅಂತ ತೋರಿಸಿದ್ದಾರೆ.