ಬಂಗಾರವನ್ನೇ ತೊಡದ ಬಂಗಾರದ ಮನುಷ್ಯ... !
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಡಾ ರಾಜ್ ಕುಮಾರ್ ಅವರು ‘ಬಂಗಾರದ ಮನುಷ್ಯ’ ಎಂಬ ಬಿರುದು ಕೊಟ್ಟರು ಎಂದಿಗೂ ತಮ್ಮ ಮೈ ಮೇಲೆ ಚಿನ್ನವನ್ನು ಹಾಕಿಕೊಂಡಿಲ್ಲ.
ಕನ್ನಡದ ವರನಟ, ನಟ ಸಾರ್ವಭೌಮ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಡಾ ರಾಜ್ ಕುಮಾರ್ ಅವರ 94ನೇ ಜಯಂತಿ. ಇನ್ನು ‘ಬಂಗಾರದ ಮನುಷ್ಯ’ ಎಂಬ ಬಿರುದು ಕೊಟ್ಟರು ರಾಜ್ ಕುಮಾರ್ ಎಂದಿಗೂ ತಮ್ಮ ಮೈ ಮೇಲೆ ಚಿನ್ನವನ್ನು ತೊಟ್ಟವರಲ್ಲ. ತಮ್ಮ ಮನೆಯಲ್ಲಿಯೇ ನಿರ್ಮಾಣ ಸಂಸ್ಥೆ ಇದ್ದರೂ ಅವರ ಹೆಸರಿನಲ್ಲಿ ಯಾವುದೇ ಹಣಕಾಸಿನ ವ್ಯವಹಾರ ನಡೆಯಲಿಲ್ಲ. ಪತ್ನಿ ಪಾರ್ವತಮ್ಮನವರೇ ಹಣದ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಒ್ಮಮೆ ಕಾರಲ್ಲಿ ಹೋಗುತ್ತಿದ್ದಾಗ ಒಬ್ಬರು ಹಣ ಕೇಳಿದಾಗ ಅಣ್ಣಾವ್ರು ಪಾರ್ವತಮ್ಮನವರಿಂದ ಒಂದು ನೋಟು ಪಡೆದರಂತೆ. ಅದು 500 ರೂಪಾಯಿ ನೋಟಾಗಿತ್ತು. ಅಣ್ಣಾವ್ರು ಆ ನೋಟನ್ನ ನೋಡಿ ಅರೆ 500 ರೂಪಾಯಿ ನೋಟು ಬಂದಿದೆಯಾ ಎಂದು ಅಚ್ಚರಿ ಪಟ್ಟರಂತೆ, ಅಲ್ಲಿಗೆ ಅಣ್ಣಾವ್ರಿಗೆ ಯಾವತ್ತೂ ಹಣ ಒಡವೆ ಮೇಲೆ ಮೋಹ ಇರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅದಕ್ಕೆ ಅಲ್ವೇ ಹೇಳಿದ್ದು ಬಂಗಾರ ಹಾಕಿಕೊಳ್ಳದೆ ಗುಣಗಳಿಂದಲೆ ಬಂಗಾರದ ಮನುಷ್ಯನಾದ ಎಂದು.