Asianet Suvarna News Asianet Suvarna News
breaking news image

ಗಾಳಿಪಟ-2 ಮೇಷ್ಟ್ರು ಅನಂತ್ ನಾಗ್ ನಮ್ಮ ನಾಡಿನ ಸಂಸ್ಕೃತ ಪಂಡಿತ- ಯೋಗರಾಜ್ ಭಟ್

ಯೋಗರಾಜ್ ಭಟ್ ಗಾಳಿಪಟ-2 ಚಿತ್ರದ ಬಗ್ಗೆ ಮಾತನಾಡಿ ಮೇಷ್ಟ್ರು ಅನಂತ್ ನಾಗ್. ನಮ್ಮ ನಾಡಿನಲ್ಲಿ ನನಗೆ ಗೊತ್ತಿರುವ ಹಾಗೆ ಸಂಸ್ಕೃತ ಪಂಡಿತ್ ಅಂದರೆ ಅನಂತ್ ನಾಗ್ ಎಂದು ಹೇಳಿದ್ದಾರೆ. ಇನ್ನು ಇಡೀ ತಂಡದ ಬಗ್ಗೆ ಯೋಗರಾಜ್ ಭಟ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಯೋಗರಾಜ್ ಸಾರಥ್ಯದಲ್ಲಿ ಬರ್ತಿರುವ ಗಾಳಿಪಟ-2 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಗಾಳಿಪಟ ಸಿನಿಮಾ ಮೂಲಕ ದೊಡ್ಡ ಹಿಟ್ ನೀಡಿದ್ದ ಭಟ್ರು ಇದೀಗ ಪಾರ್ಟ್-2 ಮೂಲಕ ಮತ್ತೆ ಬರ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ಈ ವೇಳೆ ಸಿನಿಮಾತಂಡ ಅನೇಕ ವಿಚಾರಗಳನ್ನು ಹಂಚಿಕೊಂಡಿದೆ.

ಪ್ರೆಸ ಮೀಟ್ ನಲ್ಲಿ ಮಾತನಾಡಿದ ಯೋಗರಾಜ್ ಭಟ್ ಚಿತ್ರದಲ್ಲಿ ಮೇಷ್ಟ್ರು ಅನಂತ್ ನಾಗ್. ನಮ್ಮ ನಾಡಿನಲ್ಲಿ ನನಗೆ ಗೊತ್ತಿರುವ ಹಾಗೆ ಸಂಸ್ಕೃತ ಪಂಡಿತ್ ಅಂದರೆ ಅನಂತ್ ನಾಗ್ ಎಂದು ಹೇಳಿದ್ದಾರೆ. ಇನ್ನು ಇಡೀ ತಂಡದ ಬಗ್ಗೆ ಯೋಗರಾಜ್ ಭಟ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.  ಇನ್ನು ತುಂಬಾ ಇಷ್ಟಪಡುವ ತಂತ್ರಜ್ಞರಲ್ಲಿ ಪವನ್ ಕೂಡ ಒಬ್ಬರು ಎಂದು ಹೇಳಿದರು.

Video Top Stories