ಪ್ರಭಾಸ್‌ ಅಭಿನಯದ 'ಕಲ್ಕಿ 2898 ಎಡಿ' ಏಕಕಾಲದಲ್ಲೇ ಮೂರು 'ಒಟಿಟಿ'ಗಳಿಗೆ ಮಾರಾಟ

ಕಲ್ಕಿ 2898 ಎಡಿ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಹಾಲಿವುಡ್ ಸಿನಿಮಾಗಳನ್ನು ಮೀರಿಸುವಂತಿದೆ ದೃಶ್ಯಗಳು ‘ಕಲ್ಕಿ 2898 ಎಡಿ’ ಸಿನಿಮಾದ ಡಿಜಿಟಲ್ ಹಕ್ಕು ಸುಮಾರು 100 ಕೋಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. 
 

First Published May 30, 2024, 5:14 PM IST | Last Updated May 30, 2024, 5:14 PM IST

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಭಾರತದ ಬಹು ನಿರೀಕ್ಷೆಯ ಸಿನಿಮಾ ಆಗಿದೆ. ಈ ಸಿನಿಮಾದ ಡಿಜಿಟಲ್ ಹಕ್ಕನ್ನು ಮೂರು ಒಟಿಟಿಗಳು ಭಾರಿ ಮೊತ್ತದ ಹಣ ನೀಡಿ ಖರೀದಿ ಮಾಡಿವೆ. ಹಾಲಿವುಡ್ನ ‘ಡ್ಯೂನ್’, ‘ಐ ರೋಬಾಟ್’ ಸಿನಿಮಾಗಳನ್ನು ನೆನಪಿಸುವಂತಿರುವ ‘ಕಲ್ಕಿ’ ಕತೆ, ನಿರ್ಮಾಣ, ಬಹುತಾರಾಗಣ ಇನ್ನೂ ಹಲವಾರು ಕಾರಣಗಳಿಗೆ ಗಮನ ಸೆಳೆದಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಹಾಲಿವುಡ್ ಸಿನಿಮಾಗಳನ್ನು ಮೀರಿಸುವಂತಿದೆ ದೃಶ್ಯಗಳು ‘ಕಲ್ಕಿ 2898 ಎಡಿ’ ಸಿನಿಮಾದ ಡಿಜಿಟಲ್ ಹಕ್ಕು ಸುಮಾರು 100 ಕೋಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ‘ಆರ್‌ಆರ್‌ಆರ್‌’ ಸಿನಿಮಾದ ದಾಖಲೆಯನ್ನು ಮುರಿದು ‘ಕಲ್ಕಿ’ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆ. 

ಅಂಬರೀಶ್ ಜನ್ಮದಿನ; ಪೂಜೆ ಸಲ್ಲಿಸಿದ ಕುಟುಂಬ, ಫ್ಯಾನ್ಸ್: ಮಂಡ್ಯದ ಗಂಡು ಸ್ಯಾಂಡಲ್ವುಡ್ ಹಿರಿಯ ನಟ ಅಂಬರೀಶ್ ಅವರ 72 ನೇ ಹುಟ್ಟುಹಬ್ಬವಿಂದು. ಆಗಮಿಸಿದ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಅಸಂಖ್ಯಾತ ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿದರು. ಕುಟುಂಬಸ್ಥರು ಪೂಜೆ ಸಲ್ಲಿಸಿದ ನಂತರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಸಮಾಧಿಗೆ ಪೂಜೆ ಸಲ್ಲಿಸಿದರು.

'ಜನಕ' ಟ್ರೈಲರ್ ಹಾಡು ಬಿಡುಗಡೆ: ತಂದೆ ಮಗನ ಸುತ್ತ ನಡೆಯೋ ಹೃದಯಂಗಮ ಕಥಾಹಂದರ ಹೊಂದಿರುವ ಚಿತ್ರ 'ಜನಕ' ಬಿಡುಗಡೆಗೆ ಸಿದ್ದವಾಗಿದೆ. ಮನು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜೊತೆಗೆ ಚಿತ್ರದ ನಾಯಕನಾಗೂ ಅಭಿನಯಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಎರಡು ಹಾಡುಗಳ ಪ್ರದರ್ಶನ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಓಂಶಕ್ತಿ ಕ್ರಿಯೇಶನ್ಸ್ ಲಾಂಛನದಲ್ಲಿ ನಾಯಕನ ತಾಯಿಯೂ ಆದ  ಎ.ಪ್ರೇಮಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮನು ಹಾಗೂ ಅವರ ತಾಯಿ ಇಬ್ಬರೂ ಸಿನಿಮಾ ಪ್ರೇಮಿಗಳು. ಇನ್ನು ಈ ಚಿತ್ರದಲ್ಲಿ ರಕ್ಷಾ ಹಾಗೂ ಶಾಲಿನಿ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಸುರೇಶ್ ಬಾಬು, ರಾಜಲಕ್ಷ್ಮಿ, ಆನಂದ್ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ.ಮುಂದಿನ ತಿಂಗಳ ವೇಳೆಗೆ ಚಿತ್ರವನ್ನು ರಿಲೀಸ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

ಇತ್ತೀಚೆಗೆ ಶಿಲ್ಪಾ ಶೆಟ್ಟಿಗೆ ಭಕ್ತಿ ಹೆಚ್ಚಾಯಿತೆ?: ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಮಾಡಿಕೊಂಡಿರೋ ಎಡವಟ್ಟುಗಳು ಒಂದೆರಡಲ್ಲ. ಅವರು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಕ್ಕಿ ಬಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜ್ ಕುಂದ್ರಾ ಹೆಸರೂ ಇದ್ದು, ಸುಮಾರು 90 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇದರಿಂದ ಶಿಲ್ಪಾ ಶೆಟ್ಟಿ ವಿಚಲಿತರಾಗಿದ್ದಾರೆ. ಆದರೂ ಎಲ್ಲವೂ ಸರಿ ಇದೆ ಎಂಬ ರೀತಿಯಲ್ಲೇ ಅವರು ತೋರಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಶಿಲ್ಪಾ ಶೆಟ್ಟಿ ಅವರು ಆಗಾಗ ದೇವಸ್ಥಾನಗಳಿಗೆ ತೆರಳುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿಗೆ ತೆರಳಿ ಭೂತ ಕೋಲ ವೀಕ್ಷಿಸಿದ್ದರು. ಈಗ ಅವರು ಮೈಸೂರಿನಲ್ಲಿ ನಂಜನಗೂಡು ನಂಜುಡೇಶ್ವರನ ಸನ್ನಿಧಾನಕ್ಕೆ ತೆರಳಿದ್ದಾರೆ. ಮೈಸೂರಿನಲ್ಲಿ ‘ಕೆಡಿ’ ಶೂಟ್ ನಡೆಯುತ್ತಿದ್ದು, ಇದರ ಚಿತ್ರೀಕರಣದಲ್ಲಿ ಅವರು ಭಾಗಿ ಆಗಿದ್ದಾರೆ. ಈ ವೇಳೆ ಅವರು ಸಮಯ ಮಾಡಿಕೊಂಡು ನಂಜುಡೇಶ್ವರಕ್ಕೆ ತೆರಳಿದ್ದಾರೆ. ಅವರಿಗೆ ದೇವರ ಮೇಲೆ ಭಕ್ತಿ ಹೆಚ್ಚಲು ಅವರ ಜೀವನದಲ್ಲಿ ಉಂಟಾಗುತ್ತಿರುವ ಏರಿಳಿತ ಕಾರಣವೇ ಎನ್ನುವ ಪ್ರಶ್ನೆ ಮೂಡಿದೆ.

Video Top Stories