ವಿಕ್ರಮ್ ಹೊಸ ಸಿನಿಮಾ ಟೈಟಲ್ ಟೀಸರ್ ಔಟ್, ಹೇಗಿದೆ ಕ್ರೇಜಿಸ್ಟಾರ್ ಕಿರಿಯ ಪುತ್ರನ ಸಿನಿಮಾ ಟೈಟಲ್..?

ಡಾ.ವಿ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಎರಡನೇ ಸಿನಿಮಾಗೇ  'ಮುಧೋಳ್' ಎಂಬ  ಟೈಟಲ್ ಇಡಲಾಗಿದೆ.

First Published Apr 28, 2023, 4:26 PM IST | Last Updated Apr 28, 2023, 4:26 PM IST

ಡಾ.ವಿ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಎರಡನೇ ಸಿನಿಮಾಗೇ  'ಮುಧೋಳ್' ಎಂಬ  ಟೈಟಲ್ ಇಡಲಾಗಿದೆ. ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ  ನಡುವೆ  ವಿಕ್ರಮ್ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್  ಪಂಚೆ ಉಟ್ಟು ಮುಧೋಳ ನಾಯಿ ಜೊತೆಗೆ ಕಂಪ್ಲೀಟ್ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಮುಧೋಳ್ ಎಂಬ ಟೈಟಲ್ ಕೊಟ್ಟಿದ್ದೇ ವಿ. ರವಿಚಂದ್ರನ್. ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್, 'ಮುಧೋಳ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ ಕಾರ್ತಿಕ್‌ ನಿರ್ದೇಶನದ ಮೊದಲ ಸಿನಿಮಾ ವಾಗಿದೆ. ಯುವರಾಜ್ ಚಂದ್ರನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.