Asianet Suvarna News Asianet Suvarna News

ಎಲೆಕ್ಷನ್​ ಟೈಂನಲ್ಲಿ ರಾಹುಲ್​ ಗಾಂಧಿ ಮೇಲೆ ಹೊಸ ಬಾಂಬ್ ಬ್ಲ್ಯಾಸ್ಟ್: ಐಶ್ವರ್ಯ ರೈ ಬಗ್ಗೆ ರಾಹುಲ್ ಹೇಳಿದ್ದೇನು ಗೊತ್ತಾ?

ಲೋಕಸಭೆ ಎಲೆಕ್ಷನ್​ ಅನೌನ್ಸ್​ಗೆ ಕಿಕ್ ಸ್ಟಾರ್ಟ್ ಆಗಿದೆ. ಮಾರ್ಚ್​​ನಲ್ಲಿ ಲೋಕಸಭೆ ಎಲೆಕ್ಷನ್ ಡೇಟ್​ ಅನೌನ್ಸ್ ಆಗುತ್ತೆ. ಈ ಟೈಂನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಹೊಸ ಆರೋಪ ಒಂದು ಬ್ಲ್ಯಾಸ್ಟ್ ಆಗಿದೆ. 

ಲೋಕಸಭೆ ಎಲೆಕ್ಷನ್​ ಅನೌನ್ಸ್​ಗೆ ಕಿಕ್ ಸ್ಟಾರ್ಟ್ ಆಗಿದೆ. ಮಾರ್ಚ್​​ನಲ್ಲಿ ಲೋಕಸಭೆ ಎಲೆಕ್ಷನ್ ಡೇಟ್​ ಅನೌನ್ಸ್ ಆಗುತ್ತೆ. ಈ ಟೈಂನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಹೊಸ ಆರೋಪ ಒಂದು ಬ್ಲ್ಯಾಸ್ಟ್ ಆಗಿದೆ. ಬಾಲಿವುಡ್​ ತಾರೆ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ವಿರುದ್ಧ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಅವಹೇಳನಕಾರಿ ಮಾತನಾಡಿದ್ದಾರೆ ಅನ್ನೋ ಆರೋಪ ಹುಟ್ಟಿದೆ. ಟಿವಿ ಕಾರ್ಯಕ್ರಮಗಳಲ್ಲಿ ಏನೇ ಆದರೂ ಪ್ರಧಾನಿ ನರೇಂದ್ರ ಮೋದಿಯನ್ನ ತೋರಿಸುತ್ತಾರೆ. ಅದು ಬಿಟ್ಟರೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಕುಣಿಯುವುದನ್ನು ತೋರಿಸುತ್ತಾರೆ. 

ಎಷ್ಟೆಂದರೂ ಆಕೆ ಕುಣಿಯುವವಳು, ನಾಚ್ ನೇ ವಾಲಿ ಅಲ್ಲವೇ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ರಂತೆ. ಇದನ್ನ ವಿರೋಧಿಸಿ ಈಗ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ರಾಹುಲ್​ ವಿರುದ್ಧ ವಾಗ್ಧಾಳಿ ಮಾಡಿದೆ. ರಾಹುಲ್ ಗಾಂಧಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಇದೇ ಮೊದಲಲ್ಲ. ಕಾಂಗ್ರೆಸ್​ನ‌ ಹಲವು ನಾಯಕರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ದೇಶಕ್ಕೇ ಕೀರ್ತಿ ತಂದು ಕೊಟ್ಟ ಮಹಿಳೆ ಮಂಗಳೂರಿನ ಐಶ್ವರ್ಯಾ ರೈ ಬಗ್ಗೆಯೂ ಮಾತನಾಡಿದ್ದಾರೆ ಎಂದಿದ್ದಾರೆ. 

Video Top Stories