Asianet Suvarna News

KGF-2 ಚಿತ್ರದ ಬಗ್ಗೆ ಕಮೆಂಟ್: ಯಶ್ ಫ್ಯಾನ್ಸ್ ಮುನಿಸು

Jun 17, 2021, 4:16 PM IST

ಪ್ರಶಾಂತ್ ನೀಲ್ ನಿರ್ದೇಶನದ ಸಾಮರ್ಥ್ಯ ತೋರಿಸಿಕೊಟ್ಟಿದ್ದು ಕೆಜಿಎಫ್ ಸಿನಿಮಾ. ಯಶ್ ಅದ್ಭುತ ನಟನೆಯೊಂದಿಗೆ ನಿರ್ದೇಶಕನ ಕೈ ಚಳಕವೂ ಸೇರಿ ಯಶಸ್ವಿ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಇದೀಗ ಇತಿಹಾಸ. ಇದೀಗ ಕೆಜಿಎಫ್-2 ರಿಲೀಸ್‌ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ  ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪಾ, ಕೆಜಿಎಫ್‌ಗಿಂತಲೂ ಹತ್ತು ಪಟ್ಟು ಚೆನ್ನಾಗಿದೆ ಎಂದು ಹೇಳಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಯಶ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಅಷ್ಟಕ್ಕೂ ಈ ಹೇಳಿಕೆ ಕೊಟ್ಟಿದ್ದೇಕೆ, ಯಾರು? ನೋಡಿ ಈ ವೀಡಿಯೋ

ಸಿನಿಮಾ ಹಂಗಾಮಾ ವೀಡಿಯೋಗಳಿಗೆ ಇಲ್ಲಿ ಕ್ಲಿಕ್ ಮಾಡಿ