Asianet Suvarna News Asianet Suvarna News

ಹುಟ್ಟುಹಬ್ಬದಂದೇ ಗಾಡ್ ಫಾದರ್ ಆಗಿ ಬಂದ ಚಿರಂಜೀವಿ; ಹೇಗಿದೆ ಸಲ್ಮಾನ್-ಮೆಗಾಸ್ಟಾರ್ ಜುಗಲ್ಬಂಧಿ?

ಚಿರಂಜೀವಿ ತನ್ನ ಹುಟ್ಟುಹಬ್ಬದ ದಿನವೇ ಗಾಡ್ ಫಾದರ್ ಆಗಿ ಬಂದಿದ್ದಾರೆ. ಬರ್ತ್ಡೇ ಸೆಲೆಬ್ರೇಷನ್ನಲ್ಲಿ ಮೇಗಾ ಸ್ಟಾರ್ ತಮ್ಮ ಗಾಡ್ ಫಾದರ್ ಸಿನಿಮಾದ ಟೀಸರ್ ಅನ್ನ ಫ್ಯಾನ್ಸ್ಗಾಗಿ ಕೊಟ್ಟಿದ್ದಾರೆ. 

First Published Aug 23, 2022, 4:17 PM IST | Last Updated Aug 23, 2022, 4:17 PM IST

ಭಾರತೀಯ ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿಗೆ ಜನ್ಮದಿನ. ಚಿರಂಜೀವಿ ಹುಟ್ಟುಹಬ್ಬವನ್ನ ಅವ್ರ ಫ್ಯಾನ್ಸ್ ಅದ್ಧೂರಿಯಾಗಿಸೋದು ನಿಜ. ಆದ್ರೆ ಈ ಭಾರಿ ಈ ಆಚಾರ್ಯನ ಬರ್ತ್ಡೇ ಮತ್ತಷ್ಟು ಸೂಪರ್ ಆಗಿದೆ. ಯಾಕಂದ್ರೆ ಚಿರಂಜೀವಿ ತನ್ನ ಹುಟ್ಟುಹಬ್ಬದ ದಿನವೇ ಗಾಡ್ ಫಾದರ್ ಆಗಿ ಬಂದಿದ್ದಾರೆ. ಬರ್ತ್ಡೇ ಸೆಲೆಬ್ರೇಷನ್ನಲ್ಲಿ ಮೇಗಾ ಸ್ಟಾರ್ ತಮ್ಮ ಗಾಡ್ ಫಾದರ್ ಸಿನಿಮಾದ ಟೀಸರ್ ಅನ್ನ ಫ್ಯಾನ್ಸ್ಗಾಗಿ ಕೊಟ್ಟಿದ್ದಾರೆ. ಗಾಡ್ ಫಾದರ್ ಟೀಸರ್ ಹೈಲೇಟ್ ಅಂದ್ರೆ ಮೆಗಾಸ್ಟಾರ್ ಹಾಗು ಬಾಕ್ಸಾಫಿಸ್ ಸುಲ್ತಾನ್ ಸಲ್ಮಾನ್ ಖಾನ್ ಒಂದೇ ದೃಷ್ಯದಲ್ಲಿ ಕಾಣಿಸಿಕೊಂಡಿರೋದು. ಇದರ ಜೊತೆಗೆ ಮೆಗಾಸ್ಟಾರ್ ಎಂಟ್ರಿ ಮೈ ರೋಮಾಂಚನ ಗೊಳಿಸೋ ಹಾಗಿದೆ. ಚಿರಂಜೀವಿ ಹಾಗು ಸಲ್ಮಾನ್ ಖಾನ್ ಅಣ್ಣ ತಮ್ಮಂದಿರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ರಾಜ್ ನಿರ್ಮಾಣದ ಗಾಡ್ಫಾದರ್ ಸಿನಿಮಾ ಮಲೆಯಾಳಂನ ‘ಲೂಸಿಫರ್’ ಸಿನಿಮಾದ ರಿಮೇಕ್.. ಹಾಗಿದ್ರು ಈ ಸಿನಿಮಾ ಮೇಲೆ ಚಿರಂಜೀವಿ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.