Asianet Suvarna News Asianet Suvarna News

Rashmika Mandanna: ತೆಲುಗು ಚಿತ್ರರಂಗದಲ್ಲೂ ರಶ್ಮಿಕಾಗೆ ಬ್ಯಾನ್ ಭಯ...!

ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್ ಆಗ್ಬೇಕು ಅನ್ನೋ ಅಭಿಯಾನ ಶುರುವಾಗಿತ್ತು. ಈಗ ಶ್ರೀವಲ್ಲಿ ಬ್ಯಾನ್ ಲಡಾಯಿ ಟಾಲಿವುಡ್ ಅಂಗಳದಲ್ಲೂ ಗುಲ್ಲೆದ್ದಿದೆ.

ಟಾಲಿವುಡ್ ಹ್ಯಾಂಡ್ಸಮ್ ಸ್ಟಾರ್ ನಾಗಶೌರ್ಯ ವೇರಿ ಟ್ಯಾಲೆಂಟೆಡ್ ಆ್ಯಕ್ಟರ್ ಕಮ್ ನಿರ್ಮಾಪಕ. ಕಿರಿಕ್ ಪಾರ್ಟಿ ಮೂಲಕ ಫೇಮಸ್ ಆಗಿದ್ದ ರಶ್ಮಿಕಾಗೆ ಚಲೋ ಸಿನಿಮಾದಲ್ಲಿ ಚಾನ್ಸ್ ಕೊಟ್ಟು ತೆಲುಗು ಚಿತ್ರರಂಗದ ಅ.ಆ.ಇ.ಈ ಕಲಿಸಿಕೊಟ್ಟಿದ್ದು ಕೂಡ ನಾಗಶೌರ್ಯ. ಆದ್ರೆ ಚಲೋ ಸಿನಿಮಾದ ತನ್ನ ಕೋ ಸ್ಟಾರ್ ಹಾಗೂ ಸಿನಿಮಾ ಮಾಡೋಕೆ ಅವಕಾಶ ಕೊಟ್ಟು ಕೈ ತುಂಬಾ ಸಂಬಳ ಕೊಟ್ಟ ನಾಗಶೌರ್ಯ ಜೊತೆಗೆ ರಶ್ಮಿಕಾ ಮಂದಣ್ಣ ಧಿಮಾಕಿನಿಂದ ನಡೆದುಕೊಂಡಿದ್ರಂತೆ. ಇದನ್ನು ಟಾಲಿವುಡ್ ಚಿತ್ರರಂಗದ ಫೇಮಸ್ ರೈಟರ್ ತೋಟಾ ಪ್ರಸಾದ್ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಇದೀಗ ತೆಲುಗು ಚಿತ್ರರಂಗದಲ್ಲೂ ರಶ್ಮಿಕಾರನ್ನು ಬ್ಯಾನ್ ಮಾಡಬೇಕು ಅನ್ನೋ ಅಭಿಯಾನ ಶುರುವಾಗಿದೆ. 

RRR; ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ನಿರ್ದೇಶಕ ರಾಜಮೌಳಿ

Video Top Stories