ಬಿಜೆಪಿ ಸೇರ್ತಾರಾ ಟಾಲಿವುಡ್ ಸ್ಟಾರ್ ಜೂ. ಎನ್‌ಟಿಆರ್?

ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಲುಗಿನ ಖ್ಯಾತ ನಟ ಜೂ.ಎನ್ ಟಿ ಆರ್ ಅವರನ್ನು ಭೇಟಿಯಾಗಿದ್ದಾರೆ. ಬಳಿಕ ಜೂ ಎನ್ ಟಿ ಆರ್ ಬಿಜೆಪಿ ಸೇರ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

First Published Aug 23, 2022, 4:59 PM IST | Last Updated Aug 23, 2022, 4:59 PM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಲುಗಿನ ಖ್ಯಾತ ನಟ ಜೂ.ಎನ್ ಟಿ ಆರ್ ಅವರನ್ನು ಭೇಟಿಯಾಗಿದ್ದಾರೆ. ಭಾನುವಾರ (ಆಗಸ್ಟ್ 21) ಹೈದರಾಬಾದ್ ನಲ್ಲಿ ಇಬ್ಬರು ಭೇಟಿಯಾಗಿದ್ದಾರೆ. ಅಮಿತ್ ಶಾ ತೆಲುಗು ಸ್ಟಾರ್ ಭೇಟಿಯಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.  2023ರ ಚುಮಾವಣೆಯ ಹಿನ್ನಲ್ಲೇ ಮುಂಚಿತವಾಗಿ ಜೂ ಎನ್ ಟಿ ಆರ್ ಭೇಟಿಯಾಗಿ ನಟನನ್ನು ಒಲಿಸಿಕೊಳ್ಳುವ ಬಿಜೆಪಿ ತಂತ್ರ ಎನ್ನುವ ಮಾತು ಕೇಳಿಬರುತ್ತಿದೆ. ಅಮಿತ್ ಶಾ ಮತ್ತು ಜೂ.ಎನ್ ಟಿ ಆರ್ ಇಬ್ಬರು ಸುಮಾರು 15 ನಿಮಿಷಕ್ಕೂ ಅಧಿಕ ಸಮಯ ಮಾತುಕತೆ ನಡೆಸಿದರು. ನಂತರ ಹೈದರಾಬಾದ್‌ನ ಶಂಶಾಬಾದ್‌ನ ನೊವೊಟೆಲ್ ಹೋಟೆಲ್‌ನಲ್ಲಿ ಅಮಿತ್ ಶಾ ಮತ್ತು  ಜೂ. ಎನ್ ಟಿ ಆರ್ ಇಬ್ಬರು ಮಾತುಕತೆ ನಡೆಸಿದರು. ಇಬ್ಬರು ಭೇಟಿಯ ಬಳಿಕ ಜೂ.ಎನ್ ಟಿ ಆರ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಜೂ ಎನ್ ಟಿ ಆರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.