Asianet Suvarna News Asianet Suvarna News

ಪಾಕಿಸ್ತಾನಿ ಹುಡುಗಿಯ ಡ್ಯಾನ್ಸ್ ಕಾಪಿ ಮಾಡಿದ ಮಾಧುರಿ: ರೆಟ್ರೋ ಲುಕ್‌ನಲ್ಲಿ ಅನುಷ್ಕಾ ಶರ್ಮಾ

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಮಾಡಿರುವ ರೀಲ್ಸ್‌ ವೈರಲ್‌ ಆಗಿದೆ. ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ರೆಟ್ರೋ ಶೈಲಿಯ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. 
 

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಮಾಡಿರುವ ರೀಲ್ಸ್‌ ವೈರಲ್‌ ಆಗಿದೆ. ಪಾಕಿಸ್ತಾನದ ಹುಡಿಗಿ ಐಶಾ ಎಂಬಾಕೆ ನಾಗಿನ್‌ ಸಿನಿಮಾದ ಮೇರಾ ಏ ದಿಲ್‌ ಪುಕಾರೆ ಹಾಡಿಗೆ ಡ್ಯಾನ್ಸ್‌ ಮಾಡಿದ್ರು. ಇದೇ ಡ್ಯಾನ್ಸ್‌ ಅನ್ನು ಮಾಧುರಿ ದೀಕ್ಷಿತ್‌ ಕಾಪಿ ಮಾಡಿ ಕುಣಿದಿದ್ದಾರೆ ಇದನ್ನು ನೋಡಿದ್ದ ಹಲವರು ಈ ಹಾಡಿಗೆ ನೀವು ಕುಣಿಯಬಾರದಾಗಿತ್ತು ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಇನ್ನು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ಸಿನಿಮಾಗೆ ವಾಪಾಸ್ ಆಗಿದ್ದಾರೆ. ಅನುಷ್ಕಾ ಅವರ ರೆಟ್ರೋ ಶೈಲಿಯ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಲಾ ಚಿತ್ರದಲ್ಲಿ ಅನುಷ್ಕಾ ಕಪ್ಪು-ಬಿಳುಪು ಮಾಂಟೇಜ್‌ನಲ್ಲಿ ಮಿಂಚಿದ್ದಾರೆ. 1940ರ ದಶಕದ ನಾಯಕಿಯ ಪಾತ್ರ ಮಾಡಿದ್ದಾರೆ. ಕಲಾ ಸಿನಿಮಾದ ಒಂದು ಹಾಡಿನಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದು, ಅನುಷ್ಕಾ ಎಂಟ್ರಿಯಿಂದ ಈ ಸಿನಿಮಾಗೆ ಮತ್ತಷ್ಟು ಬಲ ಬಂದಿದೆ. 

Video Top Stories