Asianet Suvarna News Asianet Suvarna News

ಕುತೂಹಲ ಮೂಡಿಸುತ್ತಿದೆ ಕಂಗನಾ ಹೊಸ ಅಪ್‌ಡೇಟ್: ಜ್ಯೋತಿಕಾ ಮಾಡಿದ ಪಾತ್ರದಲ್ಲಿ ಬಾಲಿವುಡ್ ಕ್ವೀನ್

'ಚಂದ್ರಮುಖಿ-2' ಚಿತ್ರದ ಕ್ಲೈಮ್ಯಾಕ್ಸ್ ಹಾಡಿನ ಚಿತ್ರೀಕರಣಕ್ಕಾಗಿ ಪ್ರಾಕ್ಟೀಸ್ ಶುರುವಾಗಿದೆ ಎಂದು ಕಂಗನಾ ರಣಾವತ್ ಟೀಂ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಟ್ವಿಟರ್ನಲ್ಲಿ ಕೊರಿಯೋಗ್ರಾಪರ್ ಕಲಾ ಮಾಸ್ಟರ್ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಈ ಸಿನಿಮಾನ ಯಾರ್ ತಾನ್ ಮರಿಯೋಕೆ ಸಾಧ್ಯ..? ಪ್ರತಿಯೊಬ್ಬರಿಗೂ ಈ ಸಿನಿಮಾ ನೋಡುವಾಗ ಒಂದು ಕ್ಷಣ ಹೆದರಿದ  ಅನುಭವ ಆಗಿರುತ್ತೆ.  ರಜಿನಿಕಾಮತ್ ನಟಿಸಿ ಪಿ ವಾಸು ನಿರ್ದೇಶಿಸಿ ಜ್ಯೋತಿಕಾ ನಾಗವಲ್ಲಿ ಪಾತ್ರದಲ್ಲಿ ಮಿಂಚಿದ್ದ ಆ ಸಿನಿಮಾ ಇವತ್ತಿಗೂ ರಾತ್ರಿ ವೇಳೆ ನೆನಪಾದ್ರೆ ಭಯವಾಗುತ್ತೆ. ಆ ಗೆಜ್ಜೆ ಸದ್ದು.. ಜ್ಯೋತಿಕ ದೊಡ್ಡ ದೊಡ್ಡ ಕಣ್ಗಳು… ರಾರಾ… ಲಕ ಲಕ.. ಮರೆತಿಲ್ಲಾ ತಾನೆ.. ಒಂದು ವೇಳೆ ಮರೆತಿದ್ರೆ ಮತ್ತೆ ಅದನ್ನ ನೆನಪಿಸೋಕೆ  ಇದೀಗ ಬಾಲಿವುಡ್ ನಟಿ ಕಂಗನಾ ಬರುತ್ತಿದ್ದಾರೆ. ಆಗಲೆ ಡಾನ್ಸ್ ಕಲಿಯೋಕೆ ಶುರು ಮಾಡಿದ್ದಾರಂತೆ ಕಂಗನಾ. 2005ರಲ್ಲಿ ತೆರೆ ಕಂಡ ರಜನಿಕಾಂತ್ ಅಭಿನಯದ ಕ್ಲಾಸಿಕ್ ಚಿತ್ರ ಚಂದ್ರಮುಖಿಯ ಮುಂದುವರೆದ ಭಾಗವಾಗಿರುವ ಈ ಚಿತ್ರದಲ್ಲಿ ರಾಘವ ಲಾರೆನ್ಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪಿ. ವಾಸು ಆಕ್ಷನ್ ಕಟ್ ಹೇಳುತ್ತಿದ್ದಾರೆ. 

'ಚಂದ್ರಮುಖಿ-2' ಚಿತ್ರದ ಕ್ಲೈಮ್ಯಾಕ್ಸ್ ಹಾಡಿನ ಚಿತ್ರೀಕರಣಕ್ಕಾಗಿ ಪ್ರಾಕ್ಟೀಸ್ ಶುರುವಾಗಿದೆ ಎಂದು ಕಂಗನಾ ರಣಾವತ್ ಟೀಂ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಟ್ವಿಟರ್ನಲ್ಲಿ ಕೊರಿಯೋಗ್ರಾಪರ್ ಕಲಾ ಮಾಸ್ಟರ್ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಈ ಹಾಡಿಗೆ ಸಂಗೀತ ನೀಡಲಿದ್ದಾರೆ ಎಂದು ಕಂಗನಾ ರಣಾವತ್ ಬರೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಕಂಗನಾ ಚಂದ್ರಮುಖಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಚಂದ್ರಮುಖಿ ಎಂದರೆ  ಜ್ಯೋತಿಕ ರೌದ್ರಾವತಾರ ನೃತ್ಯ ಕಣ್ಣಮುಂದೆ ಬರುತ್ತದೆ.  ತಮಿಳಿನಲ್ಲಿ ಜ್ಯೋತಿಕಾ , ಕನ್ನಡದಲ್ಲಿ ಸೌಂದರ್ಯ, ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ಎಲ್ಲರೂ ಭರತನಾಟ್ಯ ಕಲಿತು  ಚಂದ್ರಮುಖಿ ಪಾತ್ರ ಮಾಡಿದ್ದರು. 

ಕೆಜಿಎಫ್-2 ದಾಖಲೆಗೆ ಪಠಾಣ್ ಕಂಠಕ: 5 ದಿನದಲ್ಲಿ 250 ಕೋಟಿ ಬಾಚಿಕೊಂಡ ಶಾರೂಖ್ ಸಿನಿಮಾ!

ಮೂವರೂ ದಕ್ಷಿಣದ ನಟಿಯರೆ, ಹಾಗೆಯೇ ಮೂವರೂ ದುಂಡಗಿದ್ದರು. ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದರು. ಇದೀಗ ಕಂಗನಾರನ್ನ ಚಂದ್ರಮುಖಿ ಪಾ್ತ್ರದಲ್ಲಿ ಇಮೇಜಿನ್ ಮಾಡಿಕೊಳ್ಳೋಕೆ ಆಗೊಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಅದಕ್ಕೆ ಕಾರಣ ಕಂಗನ ತೆಳಗಿರೋದು ಒಂದಾದರೆ ಚಂದ್ರಮುಖಿ ಪಾತ್ರಕ್ಕೆ ಕಂಗನಾ ಮುಖ ಚಹರೆ ಹೊಂದುವುದೇ ಇಲ್ಲ ಎನ್ನುವುದು ಮತ್ತೊಂದು. ಹಾಗೆ ನೋಡಿದರೆ ಚಂದ್ರಮುಖಿ ಮೊದಲಿಗೆ ಬಂದದ್ದೆ ಮಲಯಾಳಂ ನಲ್ಲಿ ಮಣಿಚಿತ್ರತಾಜುಂ ಎಂಬ ಮಲಯಾಳಂ ಸಿನಿಮಾನೆ ನಂತರ ತಮಿಳಿನಲ್ಲಿ ಚಂದ್ರಮುಖಿಯಾಯಿತು.  ಶೋಭನಾ ಸಣ್ಣಗೇ ಇದ್ದರು. ಆದರೆ ಮೂಲತಃ ಶೋಭನ ಭರತನಾಟ್ಯ ಪ್ರವೀಣೆ ಆದ್ದರಿಂದ  ಪಾತ್ರಕ್ಕೆ ತಕ್ಕಂತ ಹಾವಭಾವ ನೃತ್ಯ ನಟನೆ ಎಲ್ಲವೂ ನೋಡುಗರು ಮೆಚ್ಚುವಂತಿತ್ತು. ಆದರೆ ಈಗ ಕಂಗನಾಗೆ ಚಂದ್ರಮುಖಿ ಪಾತ್ರದ ಬಗ್ಗೆ ಬಹಳ ನೆಗೆಟಿವ್ ಕಮೆಂಟ್ಗಳೆ ಹೆಚ್ಚಾಗಿ ಬರುತ್ತಿವೆ. 

ನೀವು ಆ ಪಾತ್ರಕ್ಕೆ ಸರಿಹೊಂದುವುದಿಲ್ಲ ಎಂಬ ಕಮೆಂಟ್ಗಳೆ ಹೆಚ್ಚಿವೆ. ಇನ್ನು 'ಚಂದ್ರಮುಖಿ' 2 ಚಿತ್ರದಲ್ಲಿ ರಾಘವ ಲಾರೆನ್ಸ್ ಜೊತೆಗೆ ವಡಿವೇಲು ಕೂಡಾ ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ಸುಭಾಸ್ಕರನ್, ಈ ಯೋಜನೆಗೆ ಬಂಡವಾಳ ಹೂಡುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ಆರ್.ಡಿ. ರಾಜಶೇಖರ್ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. 'ಚಂದ್ರಮುಖಿ 2' ಚಿತ್ರದಲ್ಲಿ ನಾಯಕಿಯಾಗಿ ಲಕ್ಷ್ಮಿ ಮೆನನ್ ನಟಿಸುತ್ತಿದ್ದಾರೆ. ಕಳೆದ ವರ್ಷ ಜುಲೈ 15 ರಿಂದ ಮೈಸೂರಿನಲ್ಲಿ ಮೊದಲ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಿತ್ತು. ಇದೀಗ ಕ್ಲೈಮಾಕ್ಸ್‌ಗೆ ಕಂಗನಾ ರೆಡಿಯಾಗುತ್ತಿರೋ ಮಾಹಿತಿ ಹೊರಬಿದ್ದಿದೆ. ಬಾಲಿವುಡ್ ಚಂದ್ರಮುಖಿ ಹೇಗಿರುತ್ತೊ ಈಗಾಗಲೆ ಭೂಲ್ ಭೂಲಯ್ಯ ಹೆಸರಿನಲ್ಲಿ ಬಂದ ಹಿಂದಿಯ ಚಂದ್ರಮುಖಿ  ಸೋಲನ್ನು ಅನುಭವಿಸಿತ್ತು. ಕಂಗನಾರನ್ನ ಚಂದ್ರಮುಖಿಯಾಗಿ ಪ್ರೇಕ್ಷಕ ಸ್ವೀಕರಿಸುತ್ತಾನಾ..? ವೈಟ್ ಅಂಡ್  ವಾಚ್.

Video Top Stories