ಬಾಲಿವುಡ್‌ನಯೂ ರಾಕಿ ಭಾಯ್‌‌ದೇ ಹವಾ; ನಮ್ ಅಣ್ತಮ್ಮ ಈಗ ನಂಬರ್ 1 ಸ್ಟಾರ್

ರಾಕಿಭಾಯ್ ಬಾಲಿವುಡ್ ನ ನಂಬರ್ ಒನ್ ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ. ಕೆಜಿಎಫ್ ಸಿನಿಮಾದಿಂದ ಬಾಲಿವುಡ್ ನಲ್ಲಿ ರಾಕಿಂಗ್ ಸ್ಟಾರ್ ಖದರ್ ಬದಲಾಗಿದೆ. ಬಾಲಿವುಡ್ ಪ್ರೇಕ್ಷಕರು ಮಾತ್ರವನ್ನ ಸ್ಟಾರ್ ಗಳು ಕೂಡ ಬಾಲಿವುಡ್ ನಲ್ಲಿ ಯಶ್ ನಂಬರ್ ಒನ್ ನಟ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. 
 

First Published Aug 27, 2022, 11:41 AM IST | Last Updated Aug 27, 2022, 11:41 AM IST

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ , ಕರುನಾಡಿದ ರಾಜಾಹುಲಿ. ಕೆಜಿಎಫ್ ಕಿಂಗ್ ಯಶ್ ಈಗ ಕನ್ನಡ ಇಂಡಸ್ಟ್ರಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಭಾರತೀಯ ಸಿನಿಮಾರಂಗದಲ್ಲಿ ಧೂಳೆಬ್ಬಿಸುತ್ತಾ. ದಿ ವರ್ಲ್ಡ್ ಇಸ್ ಮೈ ಟೆರಿಟೆರಿ ಅಂತಿದ್ದಾರೆ. ಅದಷ್ಟೇ ಅಲ್ಲ ರಾಕಿಭಾಯ್ ಬಾಲಿವುಡ್ ನ ನಂಬರ್ ಒನ್ ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ. ಕೆಜಿಎಫ್ ಸಿನಿಮಾದಿಂದ ಬಾಲಿವುಡ್ ನಲ್ಲಿ ರಾಕಿಂಗ್ ಸ್ಟಾರ್ ಖದರ್ ಬದಲಾಗಿದೆ. ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಅಂತಲ್ಲ. ಯಶ್ ಅಭಿನಯ ಹಾಗೂ ಮ್ಯಾನರಿಸಂ ನೋಡಿ ಬಾಲಿವುಡ್ ಮಂದಿ ಥ್ರಿಲ್ ಆಗಿದ್ದಾರೆ..ಹಾಗಾಗಿ ತಮ್ಮ ಇಂಡಸ್ಟ್ರಿಯಲ್ಲಿರೋ ಸ್ಟಾರ್ ಗಳಿಗಿಂತಲೂ ಯಶ್ ಸಖತ್ ಡಿಫ್ರೆಂಟ್ ಎನ್ನಿಸುತ್ತಿದ್ದಾರೆ. ಹೌದು, ಯಶ್ ಈಗ ಬಾಲಿವುಡ್ ನಲ್ಲಿಯೂ ಕಿಂಗ್ ಆಗಿದ್ದಾರೆ. ಹೊಸ ರೀತಿ ಸಿನಿಮಾ. ಸಖತ್ ಆಕ್ಟಿಂಗ್ ನಿಂದ ಯಶ್ ಎಲ್ಲರ ಗಮನ ಸೆಳೆದಿದ್ದು ಬಾಲಿವುಡ್ ಪ್ರೇಕ್ಷಕರು ಮಾತ್ರವನ್ನ ಸ್ಟಾರ್ ಗಳು ಕೂಡ ಬಾಲಿವುಡ್ ನಲ್ಲಿ ಯಶ್ ನಂಬರ್ ಒನ್ ನಟ ಅನ್ನೋದನ್ನ ಒಪ್ಪಿಕೊಂಡಿದ್ದಾರೆ.