'ಜವಾನ್' ಚಿತ್ರಕ್ಕೆ ಹಾಲಿವುಡ್ ಸಾಥ್: ಕಿಂಗ್ ಖಾನ್ ಮ್ಯಾಜಿಕ್'ಗೆ ಫ್ಯಾನ್ಸ್ ಫಿದಾ..!
ಕಿಂಗ್ ಖಾನ್ ಶಾರುಖ್ ಖಾನ್ ತಮ್ಮ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ 'ಜವಾನ್' ರಿಲೀಸ್'ಗೆ ರೆಡಿಯಾಗಿದ್ದಾರೆ.
ಹಾಲಿವುಡ್'ನ 'ಮಿಷನ್ ಇಂಪಾಸಿಬಲ್ 7' ಸಿನಿಮಾ ಜೊತೆ ಜವಾನ್ ಟ್ರೈಲರ್ ರಿಲೀಸ್ ಆಗ್ತಿದೆ. ಸೆಪ್ಟೆಂಬರ್ 7 ರಂದು ಜವಾನ್ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಆದ್ರೆ ಅದಕ್ಕೂ ಮೊದಲು ಜವಾನ್ ಪರಿಚಯವನ್ನು ವಿಶ್ವಕ್ಕೆ ಮಾಡಿಸಬೇಕು ಅಂತ ಹೊರಟಿರೋ ಶಾರುಖ್ ತನ್ನ ಸಿನಿಮಾ ಟ್ರೈಲರ್'ನ್ನು ಹಾಲಿವುಡ್ ಸ್ಟಾರ್ ನಟ ಟಾಮ್ ಕ್ರೂಸ್ ಅಭಿನಯಿಸಿರುವ ‘ಮಿಷನ್ ಇಂಪಾಸಿಬಲ್ 7’ ಸಿನಿಮಾ ಜೊತೆ ರಿಲೀಸ್ ಮಾಡುತ್ತಿದ್ದಾರೆ. ಅಂದ್ರೆ ಜುಲೈ 12ರಂದು ಜವಾನ್ ಟ್ರೈಲರ್ ‘ಮಿಷನ್ ಇಂಪಾಸಿಬಲ್ 7’ ಸಿನಿಮಾ ಜೊತೆ ಬಿಡುಗಡೆ ಆಗಲಿದೆ.