Asianet Suvarna News Asianet Suvarna News

'ಅಪ್ಪು ಎಕ್ಸ್​ಪ್ರೆಸ್​ ಆಂಬ್ಯುಲೆನ್ಸ್​' ಸೇವೆ: 5 ಆ್ಯಂಬುಲೆನ್ಸ್ ಕೊಡುಗೆ ನೀಡಿದ ಯಶ್

 ಅಪ್ಪು ಎಕ್ಸ್ ಪ್ರೆಸ್' ಆಂಬ್ಯುಲೆನ್ಸ್  ಹೆಸರಿನಲ್ಲಿ 5 ಜಿಲ್ಲೆಗಳಿಗೆ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಯಶ್ ನೀಡಿದ್ದಾರೆ.

ಪುನೀತ್ ರಾಜ್‍ಕುಮಾರ್  ನಿಧನರಾದ ಮೇಲೆ  ನಟ ಪ್ರಕಾಶ್ ರೈ ಅವರು ಅಪ್ಪು ಎಕ್ಸ್ ಪ್ರೆಸ್' ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಉಚಿತ ಆ್ಯಂಬುಲೆನ್ಸ್ ಸೇವೆ ಮುಂದಾಗಿದ್ದರು. ಅಪ್ಪು ನಟನೆಯ ಗಂಧದ ಗುಡಿ ಪ್ರಿ ರಿಲೀಸ್ ಕಾರ್ಯಕ್ರಮದ ವೇಳೆ ಪ್ರಕಾಶ್ ರೈ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಆಗ  ರಾಕಿಂಗ್ ಸ್ಟಾರ್ ಯಶ್  ತಾವು ಕೂಡ ಪ್ರಕಾಶ್ ರೈ ಅವರ ಕಾರ್ಯಕ್ಕೆ ಕೈ ಜೋಡಿಸುವುದಾಗಿ ತಿಳಿಸಿದ್ದರು. ಈಗ ಕೊಟ್ಟ ಮಾತಿನಂತೆ ಯಶ್ ಅವರು ಈಗ ತಮ್ಮ ಯಶೋ ಮಾರ್ಗ ಫೌಂಡೇಶನ್ ಮೂಲಕ 5 ಆ್ಯಂಬುಲೆನ್ಸ್‌ಳನ್ನು ಕೊಡುಗೆ ಆಗಿ ನೀಡಿದ್ದು ಈ ವಿಷಯವನ್ನು ಪ್ರಕಾಶ್ ರೈ ಅವರು ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಯಶ್ ಅವರು ನೀಡಿರುವ 5 ಆ್ಯಂಬುಲೆನ್ಸ್‍ಗಳ ಸೇವೆಯನ್ನು ಬೀದರ್, ಕಲಬುರಗಿ, ಉಡುಪಿ, ಕೊಳ್ಳೇಗಾಲ, ಕೊಪ್ಪಳ ಜಿಲ್ಲೆಗಳಿಗೆ ನೀಡಲಾಗಿದೆ ಎಂದು ಪ್ರಕಾಶ್ ರೈ ತಿಳಿಸಿದ್ದಾರೆ.
 

Video Top Stories