ಮತ್ತೆ ಒಂದಾಗಲಿದೆ ‘ಸಲಗ’ ಜೋಡಿ; ವಿಜಯ್ ಅಭಿಮಾನಿಗಳಲ್ಲಿ ಕುತೂಹಲ

ಸಲಗ ಚಿತ್ರದ ನಂತರ ದುನಿಯಾ ವಿಜಯ್ ಹಾಗೂ ಶ್ರೀಕಾಂತ್ ಜೋಡಿಯ ಮತ್ತೊಂದು ಸಿನಿಮಾ ಮೊಡಿ ಮಾಡಲಿದೆ. ಆ ಚಿತ್ರವನ್ನು ದೇವನೂರು ಚಂದ್ರು ನಿರ್ದೇಶನ ಮಾಡಲಿದ್ದಾರೆ.

First Published Jun 11, 2023, 12:42 PM IST | Last Updated Jun 11, 2023, 12:42 PM IST

ನಟ ದುನಿಯಾ ವಿಜಯ್ ‘ಭೀಮ’ ಚಿತ್ರದ ಶೂಟಿಂಗ್’ನಲ್ಲಿದ್ದು, ನಿರ್ಮಾಪಕ ಶ್ರೀಕಾಂತ್ ‘ಗ್ರಾಮಾಯಾಣ’, ಮತ್ತು ‘ಯುಐ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದೆಲ್ಲವೂ ಮುಗಿದ ಮೇಲೆ ವಿಜಯ್ ಮತ್ತು ಶ್ರೀಕಾಂತ್ ಮತ್ತೆ ಒಟ್ಟಿಗೆ ಕೆಲಸ ಮಾಡಲಿದ್ದಾರಂತೆ. ‘ಗ್ರಾಮಾಯಾಣ’ ಸಿನಿಮಾದ ಮುಹೂರ್ತದಲ್ಲಿ ಶ್ರೀಕಾಂತ್ ಈ ಸಂಗತಿಯನ್ನು ಅನೌನ್ಸ್ ಮಾಡಿದ್ದಾರೆ. ಸಲಗ ನಂತರ ಮತ್ತೆ ಈ ಜೋಡಿ ಒಂದಾದರೆ ಎಂತಹ ಚಿತ್ರ ಮಾಡಬಹುದು ಎಂದು ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. 

Video Top Stories