Asianet Suvarna News Asianet Suvarna News

ಬಾಲಿವುಡ್​​​ನಲ್ಲಿ ಬೆಂಕಿ ಹೊತ್ತಿಸಿದ ರಿಷಬ್ ಆ ಮಾತು: ಶೆಟ್ರು ಹೇಳಿಕೆ ಬೆನ್ನಲ್ಲೇ ಬಿಟೌನ್​ ಹೀರೊ ಹೇಳಿಕೆ ವೈರಲ್!

ನಾನು ಭಾರತವನ್ನು ಪ್ರೀತಿಸುತ್ತೇನೆ. ಅದನ್ನು ಟೀಕಿಸುವುದು ನನಗೆ ಅತ್ಯಗತ್ಯ. 'ಭಾರತ ಶ್ರೇಷ್ಠ' ಎಂದು ಹೇಳುವುದರಿಂದ ನೀವು ದೇಶದ ನಿಜವಾದ ಪ್ರೇಮಿಯಾಗುವುದಿಲ್ಲ. ಸಮಾಜದಲ್ಲಿ ಬದಲಾವಣೆ ತರಲು ನೀವು ಕೆಲಸ ಮಾಡಿದಾಗ ನೀವು ನಿಜವಾದ ದೇಶಭಕ್ತರಾಗುತ್ತೀರಿ ಅಂದಿದ್ರು.
 

First Published Aug 28, 2024, 12:06 PM IST | Last Updated Aug 28, 2024, 12:06 PM IST

ಡಿವೈನ್ ಸ್ಟಾರ್​ ರಿಷಬ್​ ಶೆಟ್ಟಿ ಬಾಲಿವುಡ್​​​ನಲ್ಲಿ ಸಿನಿಮಾಗಳ ಬಗ್ಗೆ ಮಾತನಾಡಿದ್ದ ವಿಚಾರ ಈಗ ಬಿಟೌನ್​​ ನಲ್ಲಿ ಧಗ ಧಗ ಅಂತ ಬೆಂಕಿ ಉರಿಯುವಂತೆ ಮಾಡಿದೆ. ರಿಷಬ್ ಶೆಟ್ಟಿ ಹೇಳಿಕೆಗೆ ಬಿಟೌನ್​​ನಿಂದ ಕೌಂಟರ್​ ಅಟ್ಯಾಕ್ ಆರಂಭ ಆಗಿದೆ. ಹಾಗಾದ್ರೆ ಏನಿದು ರಿಷಬ್​ ಹಾಗು ಹಿಂದಿ ಸಿನಿ ಮಂದಿಯ ವಾರ್​ ಸ್ಟೋರಿ ಅಂತೀರಾ..? ಜೆಸ್ಟ್​ ಹ್ಯಾ ಅ ಲುಕ್. ಸ್ಯಾಂಡಲ್​ವುಡ್​ ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿ ನೆಲದ ಕಥೆ ಹೇಳಿ ಗೆಲ್ತಾರೆ. ಹೀಗಾಗೆ ಎರಡೆರಡು ರಾಷ್ಟ್ರ ಪ್ರಶಸ್ತಿಗಳು ರಿಷಬ್ ಶೆಟ್ಟಿ ಮುಡಿಗೇರಿದ್ದು. ಆದ್ರೆ ಬಾಲಿವುಡ್​ ಸಿನಿ ಜಗತ್ತು ಹಾಗಲ್ಲ, ದೇಶದ ಕತೆಯನ್ನ ಕೀಳಾಗಿ ತೋರಿಸಿ ಗೆದ್ದು ದುಡ್ಡು ಮಾಡಿಕೊಳ್ತಿದ್ದಾರೆ ಇದು ಎಲ್ಲರಿಗೂ ಗೊತ್ತಿರೋ ಸತ್ಯ. ಹೀಗಾಗೆ 'ಹಿಂದಿ ಸಿನಿಮಾಗಳಲ್ಲಿ ಭಾರತ ದೇಶವನ್ನ ಕೆಟ್ಟದಾಗಿ ತೋರಿಸಿ ಪ್ರಶಸ್ತಿಗಳನ್ನು ಪಡೆಯುತ್ತಾರೆ' ಅಂತ ನಟ ರಿಷಬ್ ಶೆಟ್ಟಿ ಇತ್ತೀಚೆಗೆ ಹೇಳಿದ್ರು. 

'ಹಿಂದಿ ಸಿನಿಮಾಗಳಲ್ಲಿ ಭಾರತ ದೇಶವನ್ನ ಕೆಟ್ಟದಾಗಿ ತೋರಿಸಿ ಪ್ರಶಸ್ತಿಗಳನ್ನು ಪಡೆಯುತ್ತಾರೆ' ಅಂತ ನಟ ರಿಷಬ್ ಶೆಟ್ಟಿ ಹೇಳಿದ್ದ ಮಾತು ಈಗ ನಿಗಿ ನಿಗಿ ಬೆಂಕಿಯಂತೆ ಬಾಲಿವುಡ್​ ತುಂಬೆಲ್ಲಾ ಹೊತ್ತಿಕೊಂಡಿದೆ. ರಿಷಬ್ ಶೆಟ್ಟಿ ದೇಶಪ್ರೇಮ ಕಿಚ್ಚಿಗೆ ಬಾಲಿವುಡ್ ಕೆಂಡವಾದ. ಹಿಂದಿ ಮಂದಿ ರಿಷಬ್ ಶೆಟ್ಟಿ ಮೇಲೆ ಕೌಂಟರ್​ ಅಡ್ಯಾಕ್​ ಮಾಡುತ್ತಿದ್ದಾರೆ. ಬಾಲಿವುಡ್​​ ಜಗತ್ತಿನ ಬಗ್ಗೆ ರಿಷಬ್ ಹೇಳಿದ್ದ ಮಾತಿಗೆ ಸಾಕಷ್ಟು ಜನ ರಿಷಬ್ ಶೆಟ್ಟಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದ್ರೆ ಬಿಟೌನ್​ ಮಾತ್ರ ರಿಷಬ್ ಶೆಟ್ಟಿಗೆ ಕೌಂಟರ್​ ಅಟ್ಯಾಕ್ ಆಗಿ ಮತ್ತೊಂದು ವೀಡಿಯೋವನ್ನ ವೈರಲ್​​​ ಮಾಡುತ್ತಿದ್ದಾರೆ. ಬಾಲಿವುಡ್​ ನಟ ಜಾನ್ ಅಬ್ರಹಾಂ ಇತ್ತೀಚೆಗೆ ರಣವೀರ್ ಅಲ್ಲಾಬಾಡಿಯಾ ಪಾಡ್ಕ್ಯಾಸ್ಟ್ನಲ್ಲಿ ಭಾಗಿ ಆಗಿದ್ರು. 

ಆಗ ಮಾತನಾಡಿದ್ದ ಜಾನ್ ಅಬ್ರಹಂ, "ನಾನು ಭಾರತವನ್ನು ಪ್ರೀತಿಸುತ್ತೇನೆ. ಅದನ್ನು ಟೀಕಿಸುವುದು ನನಗೆ ಅತ್ಯಗತ್ಯ. 'ಭಾರತ ಶ್ರೇಷ್ಠ' ಎಂದು ಹೇಳುವುದರಿಂದ ನೀವು ದೇಶದ ನಿಜವಾದ ಪ್ರೇಮಿಯಾಗುವುದಿಲ್ಲ. ಸಮಾಜದಲ್ಲಿ ಬದಲಾವಣೆ ತರಲು ನೀವು ಕೆಲಸ ಮಾಡಿದಾಗ ನೀವು ನಿಜವಾದ ದೇಶಭಕ್ತರಾಗುತ್ತೀರಿ ಅಂದಿದ್ರು. 'ಭಾರತ ಶ್ರೇಷ್ಠ' ಎಂದು ಹೇಳುವುದರಿಂದ ನೀವು ದೇಶದ ನಿಜವಾದ ಪ್ರೇಮಿಯಾಗುವುದಿಲ್ಲ ಅನ್ನೋ ಜಾನ್ ಅಬ್ರಹಂ ಹೇಳಿಕೆಯನ್ನ ಇಟ್ಟುಕೊಂಡು ಈಗ ಕನ್ನಡದ ನಟ ರಿಷಬ್​ ಶೆಟ್ಟಿಗೆ ಹಿಂದಿ ಸಿನಿ ಮಂದಿ ಕೌಂಟರ್ ಕೊಡುತ್ತಿದ್ದಾರೆ. ಒಟ್ಟಿನಲ್ಲಿ ಕಾಂತಾರ ಸಿನಿಮಾ ಮೂಲಕ ಬಾಲಿವುಡ್​ ಸ್ಟಾರ್ಸ್​​ಗೆ ಟಕ್ಕರ್ ಕೊಟ್ಟಿದ್ದ ರಿಷಬ್ ಶೆಟ್ಟಿ ಈಗ ಬಿಟೌನ್ ಮಂದಿ ಕಣ್ಣಲ್ಲಿ ನಿಧಾನವಾಗಿ ಟಾರ್ಗೆಟ್ ಆಗುತ್ತಿರೋದಂತು ಸುಳ್ಳಲ್ಲ.

Video Top Stories