ಯಶ್ ದಾಖಲೆ ಮುರಿದು ನಂ.1 ಪಟ್ಟಕ್ಕೇರಿದ ಸ್ಟೈಲಿಶ್ ಸ್ಟಾರ್..ಇನ್ಸ್ಟಾಗ್ರಾಮ್‌ನಲ್ಲಿ ರಾಕಿ ಬೀಟ್‌ಮಾಡಿದ ಅಲ್ಲು

ಯಶ್ ಅತಿವೇಗವಾಗಿ ಹತ್ತು ಲಕ್ಷ ಇನ್ಸ್ಟಾಗ್ರಾಮ್ ಲೈಕ್ಸ್ ಪಡೆದ ನಟ ಎಂಬ ದಾಖಲೆಯನ್ನು ಅಲ್ಲು ಅರ್ಜುನ್ ಬೀಟ್‌ ಮಾಡಿದ್ದು 33 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಪಡೆದುಕೊಂಡಿದ್ದಾರೆ. 
 

First Published Apr 10, 2023, 2:59 PM IST | Last Updated Apr 10, 2023, 2:59 PM IST

 ಸಿನಿ ರಸಿಕರು ಯಾವಾಗಲೂ ತಮ್ಮ ನೆಚ್ಚಿನ ನಟನ ಬಗ್ಗೆ ಯಾವಾಗಲೂ ಒಂದು ಕಣ್ಣು ಇಟ್ಟಿರುತ್ತಾರೆ. ಹಾಗೇ ಸೋಶಿಯಲ್‌ ಮೀಡಿಯಾ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಇನ್ಸ್ಟಾಗ್ರಾಮ್‌ನಲ್ಲಿ ಯಾವ ನಟನಿಗೆ ಹೆಚ್ಚು ಫಾಲೋವರ್ಸ್, ಯಾವ ನಟನಿಗೆ ಹೆಚ್ಚು ಲೈಕ್ಸ್ ಎಂಬ ರೆಕಾರ್ಡ್‌ಗಳನ್ನು ಗಮನಿಸುತ್ತಿರುತ್ತಾರೆ.  ಇನ್ಸ್ಟಾಗ್ರಾಮ್‌ನಲ್ಲಿ ಅತಿ ವೇಗವಾಗಿ ಅತಿಹೆಚ್ಚು ಲೈಕ್ಸ್ ಪಡೆದ ನಟ ಎಂಬ ದಾಖಲೆಯಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಇದ್ದರು. ಯಶ್ ದೀಪಾವಳಿ ಹಬ್ಬದ ಪ್ರಯುಕ್ತ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜತೆಗಿನ ಫೋಟೊ ಅಪ್‌ಲೋಡ್ ಮಾಡಿದ್ದು,49 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಪಡೆದುಕೊಂಡಿತ್ತು. ಹೀಗಾಗಿ ಅತಿವೇಗವಾಗಿ ಹತ್ತು ಲಕ್ಷ ಇನ್ಸ್ಟಾಗ್ರಾಮ್ ಲೈಕ್ಸ್ ಪಡೆದ ನಟ ಎಂಬ ದಾಖಲೆಯನ್ನು ಯಶ್ ನಿರ್ಮಿಸಿದ್ದರು. ಈ ದಾಖಲೆಯನ್ನು ಈಗ ಅಲ್ಲು ಅರ್ಜುನ್ ಬೀಟ್‌ ಮಾಡಿದ್ದು,ಹುಟ್ಟುಹಬ್ಬದ ಪ್ರಯುಕ್ತ ಪುಷ್ಪ ದ ರೈಸ್ ತಂಡ ಬಿಡುಗಡೆ ಮಾಡಿದ ಪೋಸ್ಟರ್ ಅನ್ನು ಅಲ್ಲು ಅರ್ಜುನ್ ಹಂಚಿಕೊಂಡಿದ್ದರು. ಈ ಪೋಸ್ಟರ್ ಕೇವಲ 33 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಪಡೆದುಕೊಂಡಿದೆ.