Asianet Suvarna News Asianet Suvarna News

Samantha Ruth Prabhu: ಮಹೇಶ್ ಬಾಬು ಚಿತ್ರಕ್ಕೆ ಪೂಜಾ ಹೆಗ್ಡೆ ಬದಲಿಗೆ ಸಮಂತಾ ನಾಯಕಿ!

ಟಾಲಿವುಡ್ ನಟಿ ಸಮಂತಾ 'ಪುಷ್ಪ' ಸಿನಿಮಾದ ಐಟಂ ಸಾಂಗ್‌ನಲ್ಲಿ ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದಕ್ಕೆ ಇಡೀ ವಿಶ್ವವೇ ಫಿದಾ ಆಗಿದೆ. ಸಮಂತಾ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಮಹೇಶ್​ ಬಾಬು ಮುಂದಿನ ಚಿತ್ರಕ್ಕೆ ಸಮಂತಾ ನಾಯಕಿ ಎನ್ನಲಾಗುತ್ತಿದೆ. 

ಟಾಲಿವುಡ್ ನಟಿ ಸಮಂತಾ (Samantha) 'ಪುಷ್ಪ' (Pushpa) ಸಿನಿಮಾದ ಐಟಂ ಸಾಂಗ್‌ನಲ್ಲಿ ಅಲ್ಲು ಅರ್ಜುನ್ (Allu Arjun) ಜೊತೆ ಸೊಂಟ ಬಳುಕಿಸಿದಕ್ಕೆ ಇಡೀ ವಿಶ್ವವೇ ಫಿದಾ ಆಗಿದೆ. ಸಮಂತಾ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಮಹೇಶ್​ ಬಾಬು (Mahesh Babu) ಮುಂದಿನ ಚಿತ್ರಕ್ಕೆ ಸಮಂತಾ ನಾಯಕಿ ಎನ್ನಲಾಗುತ್ತಿದೆ. ಇತ್ತೀಚೆಗೆ ಸಮಂತಾ ಅವರು ಜ್ಯೂ. ಎನ್​ಟಿಆರ್ (Jr.NTR)​ ಜತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಕೂಡಾ ಹರಿದಾಡಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳುವುದರೊಳಗೆ ಮತ್ತೊಂದು ಸುದ್ದಿ ಹೊರ ಬಿದ್ದಿದೆ. 

Goa Vacation: ಗರ್ಲ್ಸ್​ ಗ್ಯಾಂಗ್​ ಜೊತೆ ಎಂಜಾಯ್ ಮೂಡ್‍ನಲ್ಲಿ ಸಮಂತಾ

ಮಹೇಶ್​ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ (Trivikram) ಅವರು 'ಸರ್ಕಾರಿ ವಾರಿ ಪಾಟ'  ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಬಿಡುಗಡೆಯಾದ ನಂತರ ನಂತರದಲ್ಲಿ ಹೊಸ ಸಿನಿಮಾದ ಕೆಲಸ ಆರಂಭಗೊಳ್ಳಲಿದೆ. ಮುಖ್ಯವಾಗಿ ಈ ಚಿತ್ರದಲ್ಲಿ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಸಮಯದ ಕೊರತೆಯಿಂದ ಆ ಅವಕಾಶ ಸಮಂತಾ ಪಾಲಾಗಿದೆ. ವಿಶೇಷವಾಗಿ ​ಸಮಂತಾ ಹಾಗೂ ತ್ರಿವಿಕ್ರಮ್ ನಡುವೆ ಒಳ್ಳೆಯ ಗೆಳೆತನವಿದ್ದು, ಸಮಂತಾ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಈ ಆಫರ್​ ನೀಡಿದ್ದಾರೆ ತ್ರಿವಿಕ್ರಮ್​. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories