Asianet Suvarna News Asianet Suvarna News

ಟಾಲಿವುಡ್​ ದಿಗ್ಗಜರನ್ನ ಕಾಡುತ್ತಿರೋ ನಟಿ ಸಮಂತಾ: ಹೇಮಾ ವರದಿಗೆ ನಟಿ ಫುಲ್ ಸಪೋರ್ಟ್!

ಟಾಲಿವುಡ್ ಸಿನಿ ಪ್ರೇಕ್ಷಕರ ಮನದನ್ನೆ ನಟಿ ಸಮಂತಾ ತೆಲುಗು ಚಿತ್ರ ಜಗತ್ತಿಗೆ ಎಚ್ಚರಿಕೆ ಗಂಟೆಯೊಂದನ್ನ ಕಟ್ಟೋಕೆ ಸಜ್ಜಾಗಿದ್ದಾರೆ. ಮಲೆಯಾಳಂ ಸಿನಿಮಾ ರಂಗದಲ್ಲಿ ಉರಿ ಉರಿ ಬೆಂಕಿಯಂತೆ ಉರಿಯುತ್ತಿರೋ ಹೇಮಾ ವರದಿ ಬಗ್ಗೆ ಸಮಂತಾ ದೊಡ್ಡ ಧ್ವನಿ ಎತ್ತಿದ್ದಾರೆ.

First Published Sep 3, 2024, 1:09 PM IST | Last Updated Sep 3, 2024, 1:09 PM IST

ಟಾಲಿವುಡ್ ಸಿನಿ ಪ್ರೇಕ್ಷಕರ ಮನದನ್ನೆ ನಟಿ ಸಮಂತಾ ತೆಲುಗು ಚಿತ್ರ ಜಗತ್ತಿಗೆ ಎಚ್ಚರಿಕೆ ಗಂಟೆಯೊಂದನ್ನ ಕಟ್ಟೋಕೆ ಸಜ್ಜಾಗಿದ್ದಾರೆ. ಮಲೆಯಾಳಂ ಸಿನಿಮಾ ರಂಗದಲ್ಲಿ ಉರಿ ಉರಿ ಬೆಂಕಿಯಂತೆ ಉರಿಯುತ್ತಿರೋ ಹೇಮಾ ವರದಿ ಬಗ್ಗೆ ಸಮಂತಾ ದೊಡ್ಡ ಧ್ವನಿ ಎತ್ತಿದ್ದಾರೆ. ಹಾಗಾದ್ರೆ ಮಲೆಯಾಳಂನ ಹೇಮಾ ವರಧಿ ಬಗ್ಗೆ ಸಮಂತಾ ಏನಂದ್ರು. ಸಮಂತಾ ಮಾತು ಕೇಳಿ ತೆಲುಗು ಮಂದಿಗೆ ಯಾಕೆ ಟೆನ್ಷನ್​.? ಇಲ್ಲಿದೆ ನೋಡಿ ಸಂಪೂರ್ಣ ಡಿಟೈಲ್ಸ್. ಹೇಮಾ ವರದಿ ಬಳಿಕ ಮಲಯಾಳಂ ಚಿತ್ರರಂಗ ಶೇಕ್ ಆಗಿದೆ. ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷತೆ ಇಲ್ಲ ಅನ್ನೋದನ್ನು ಈ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. 

ಈ ವರಧಿ ಜಾರಿಗೆ ಬಂದ ಮೇಲೆ ಮಲೆಯಾಳಂ ಚಿತ್ರರಂಗದ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ದಿಗ್ಗಜರೆಲ್ಲಾ ಸಿಕ್ಕಿ ಬೀಳುತ್ತಿದ್ದಾರೆ. ಇದೀಗ ಈ ವರದಿಯನ್ನ ಟಾಲಿವುಡ್​ ನಟಿ ಸಮಂತಾ ಮೆಚ್ಚಿಕೊಂಡಿದ್ದು, ತೆಲುಗು ಚಿತ್ರರಂಗದಲ್ಲೂ ಇಂತಹದ್ದೇ ಒಂದು ಕಮಿಟಿಯನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ. ನಟಿ ಸಮಂತಾ ಹೆಮಾ ವರಧಿ ಮೆಚ್ಚಿ "ನಾವು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರು ಹೇಮಾ ಕಮಿಟಿ ವರದಿಯನ್ನು ಸ್ವಾಗತ ಮಾಡುತ್ತೇವೆ. ಹಾಗೆಯೇ ವುಮನ್ಸ್ ಕಲೆಕ್ಟಿವ್ ಕೇರಳ ಹಾಕಿದ ಪ್ರಯತ್ನಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸುತ್ತೇವೆ. 

ಅದು ಇಲ್ಲಿವರೆಗೂ ಬರುವುದಕ್ಕೆ ದಾರಿ ಮಾಡಿ ಕೊಟ್ಟಿದೆ." ಎಂದು ನಟಿ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇದನ್ನ ನೋಡಿ ಟಾಲಿವುಡ್​ ಜಗತ್ತಿಗೆ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ನಟಿಯರ ಮೇಲಿನ ದೌರ್ಜನ್ಯ ಲೈಂಗಿಕ ಕಿರುಕುಳ ಪ್ರಕರಣ ಟಾಲಿವುಡ್​ನಲ್ಲೇ ಹೆಚ್ಚಾಗಿ ಸುದ್ದಿಯಾಗ್ತಾ ಇರುತ್ತೆ. ಹಾಗೇನಾದ್ರು ಹೇಮಾ ವರಧಿ ಟಾಲಿವುಡ್​​ಗೂ ಬಂದ್ರೆ ದಿಗ್ಗಜ ನಟ, ನಿರ್ದೇಶಕರು ಸಿಕ್ಕಿಕೊಳ್ಳೋ ಸಾಧ್ಯತೆ ಇದೆ. ಒಟ್ಟಿನಲ್ಲಿ ನಟಿ ಸಮಂತಾ ಈಗ ಟಿಟೌನ್​​ ದಿಗ್ಗಜರನ್ನ ಕಾಡೋಕೆ ಶುರುಮಾಡಿರೊದಂತು ನಿಜ.

Video Top Stories