ಮಸ್ತ್ ಮಸ್ತ್ ಹುಡುಗಿ ಬಂದ್ಳು; ಬಿಟೌನ್'ಗೆ ರವೀನಾ ಟಂಡನ್ ಮಗಳು ಎಂಟ್ರಿ?
ರವೀನಾ ಟಂಡನ್ ಮುದ್ದಿನ ಮಗಳು ರಶಾ ಟಂಡನ್ ಬಣ್ಣದ ಜಗತ್ತು ಪ್ರವೇಶಕ್ಕೆ ಸಜ್ಜಾಗಿದ್ದಾರಂತೆ. ಈ ಕುರಿತು ಕುತೂಹಲಕಾರಿ ಸಂಗತಿ ಇಲ್ಲಿದೆ.
18ರ ಹರೆಯದ ರಶಾ ಟಂಡನ್ ಇದೀಗ ಬಾಲಿವುಡ್ ಮಿಲ್ಕಿ ಬ್ಯೂಟಿ ಅಂತ ಫೇಮಸ್ ಆಗ್ತಿದ್ದಾರೆ. ರಶಾ ಟಂಡನ್ ಬ್ಯೂಟಿಗೆ ಮಾರು ಹೋಗುತ್ತಿರೋ ಬಾಲಿವುಡ್ ಜಗತ್ತು ರವೀನಾ ಟಂಡನ್ ಬಳಿ ನಿಮ್ಮ ಮಗಳನ್ನ ಚಿತ್ರರಂಗಕ್ಕೆ ಪರಿಚಯಿಸೋ ಚಾನ್ಸ್ ಕೊಡಿ ಅಂತ ಹೇಳುತ್ತಿದ್ದಾರಂತೆ. ರಶಾ ಟಂಡನ್ ಈಗಾಗಲೇ ಮುಂಬೈನಲ್ಲಿರುವ ಕೆಲ ನಿರ್ದೇಶಕರ ಆಫೀಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ರಶಾ ಟಂಡನ್ ಯಾರ ಜೊತೆ ಸಿನಿಮಾ ಮಾಡ್ತಾರೆ ಅನ್ನೋದು ಅಧಿಕೃತವಾಗಿಲ್ಲ. ಅಜಯ್ ದೇವಗನ್ ಅವರ ಸಂಬಂಧಿ ಅಮಾನ್ ಜೊತೆ ಹಾಗೂ ನಿರ್ದೇಶಕ ಅಭಿಷೇಕ್ ಕಪೂರ್ ಸಿನಿಮಾದಲ್ಲಿ ರಶಾ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.