ನೇಹಾ ವರ್ಕೌಟ್ ನೋಡಿದವರು ಆಹಾ ಅನ್ನೋದು ಫಿಕ್ಸ್! ಸಖತ್ ಕಸರತ್ತು ಮಾಡ್ತಾಳೆ ಕರಾವಳಿ ಬೆಡಗಿ ನೇಹಾ ಶೆಟ್ಟಿ!

ಮುಂಗಾರು ಮಳೆ-2 ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಚೆಲುವೆ ನೇಹಾ ಶೆಟ್ಟಿ. ಈ ಕರಾವಳಿ ಬ್ಯೂಟಿಯ ಹಾಲುಬಣ್ಣದ ಹೊಳಪು, ಕಣ್ ಕುಕ್ಕೋ ಮೈಮಾಟದ ಒನಪು ನೋಡಿದವರು ಒಮ್ಮೆಲೆ ಕ್ಲೀನ್ ಬೌಲ್ಡ್ ಆಗಿಬಿಟ್ರು. ಈಕೆ ಹೊಸ ಮಳೆ ಹುಡುಗಿ ಅಂತಾನೇ ಫೇಮಸ್ 

Sushma Hegde  | Published: Jan 22, 2025, 4:05 PM IST

ಈ ಮಳೆ ಹುಡುಗಿ ನಟಿಸಿದ್ದು ಒಂದೇ ಒಂದು ಕನ್ನಡ ಸಿನಿಮಾದಲ್ಲಿ. ಇದಾದ ನಂತರ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದ ನೇಹಾಗೆ ಅವಕಾಶಗಳ ಸುರಿಮಳೆಯೇ ಆಯ್ತು. ಈಗಲೂ ನೇಹಾ ಕೈಲಿ ಸಾಲು ಸಾಲು ಸಿನಿಮಾ ಇವೆ. ಕನ್ನಡದಲ್ಲ ನಟಿಸಿಲ್ಲ ಅಂದ ಮಾತ್ರಕ್ಕೆ ನೇಹಾ ಕನ್ನಡದ ಹುಡುಗ್ರಿಗೇನೂ ಮೋಸ ಮಾಡಿಲ್ಲ. ತನ್ನ ಸೋಷಿಯಲ್ ಮಿಡಿಯಾದಲ್ಲಿ ಚೆಂದ ಚೆಂದದ, ಮಾದಕ ಭಂಗಿಯ ಫೋಟೋಸ್ ಹಾಕಿ ಹುಡ್ಗರ ಕಣ್ ತಂಪು ಮಾಡ್ತಾ ಇರ್ತಾಳೆ ಈ ಚೆಲುವೆ.