ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್: 'ಎಮರ್ಜೆನ್ಸಿ' ಸಿನಿಮಾಗಾಗಿ ಆಸ್ತಿ ಅಡವಿಟ್ಟ ನಟಿ?
'ಎಮರ್ಜೆನ್ಸಿ' ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಬಾಲಿವುಡ್ ನಟಿ ಕಂಗನಾ ನಟಿಸುತ್ತಿದ್ದು, ಆಸ್ತಿಯೆಲ್ಲಾ ಅಡವಿಟ್ಟು ಎಮರ್ಜೆನ್ಸಿ ಎಂಬ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ.
ಎರಡು ರಾಷ್ಟ್ರಪ್ರಶಸ್ತಿ ಪಡೆದಿರುವ ಕಂಗನಾ ರಾಣಾವತ್, ಇದೀಗ ಮತ್ತೊಂದು ರಾಷ್ಟ್ರಪ್ರಶಸ್ತಿ ಮೇಲೆ ಕಣ್ಣು ಹಾಕಿದಂತೆ ಕಾಣುತ್ತಿದೆ. ಭಾರತದ ಪ್ರಮುಖ ರಾಜಕೀಯ ಘಟನೆ 'ತುರ್ತು ಪರಿಸ್ಥಿತಿ' ಕುರಿತು ಸಿನಿಮಾವನ್ನು ಕಂಗನಾ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ. 'ಎಮರ್ಜೆನ್ಸಿ' ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುವ ಕಂಗನಾ, ಈ ಬಾರಿಯಂತೂ ಈ ಸಿನಿಮಾಕ್ಕಾಗಿ ತಮ್ಮ ಆಸ್ತಿಯನ್ನು ಸಹ ಅಡವಿಟ್ಟಿದ್ದಾರಂತೆ.