ನಾಲ್ಕೇ ದಿನಕ್ಕೆ 500 ಸಿಗರೇಟ್ ಸೇದಿದ ನಟ, ಕ್ಯಾನ್ಸರ್ ಗ್ಯಾರಂಟಿ ಎಂದ ನೆಟ್ಟಿಗರು..!
ನಟ ನರೇಶ್, ಹೊಸ ಸಿನಿಮಾಕ್ಕಾಗಿ ನಾಲ್ಕು ದಿನದಲ್ಲಿ 500 ಸಿಗರೇಟು ಸೇದಿ ಅನಾರೋಗ್ಯಕ್ಕೆ ಗುರಿಯಾಗಿರುವುದನ್ನು ಹೇಳಿಕೊಂಡಿದ್ದಾರೆ.
ನಟ ನರೇಶ್, ಹೊಸ ಸಿನಿಮಾಕ್ಕಾಗಿ ನಾಲ್ಕು ದಿನದಲ್ಲಿ 500 ಸಿಗರೇಟು ಸೇದಿ ಅನಾರೋಗ್ಯಕ್ಕೆ ಗುರಿಯಾಗಿರುವುದನ್ನು ಹೇಳಿಕೊಂಡಿದ್ದಾರೆ. ತೆಲುಗಿನ ನಟ ನರೇಶ್ ಚಿತ್ರೀಕರಣದ ಸಮಯದಲ್ಲಿ ಕೇವಲ ನಾಲ್ಕು ದಿನದಲ್ಲಿ ಐದುನೂರು ಸಿಗರೇಟು ಸೇದಿದ್ದು, ಇದರಿಂದ ಬಹಳ ತೊಂದರೆಯನ್ನೂ ಅನುಭವಿಸಿದ್ದಾರೆ.ಇನ್ನು ಉಗ್ರಂ ಸಿನಿಮಾದಲ್ಲಿ ಕುಟುಂಬವನ್ನು ಕಳೆದುಕೊಂಡ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನರೇಶ್ ನಟಿಸಿದ್ದು, ಸಿನಿಮಾದ ಫೈಟ್ ಒಂದರ ಚಿತ್ರೀಕರಣದ ಸಂದರ್ಭದಲ್ಲಿ ನಾಲ್ಕು ದಿನಕ್ಕೆ 500 ಸಿಗರೇಟುಗಳನ್ನು ಸೇದಿದರಂತೆ. ಇದರಿಂದಾಗಿ ನರೇಶ್ಗೆ ಕೆಮ್ಮು ಪ್ರಾರಂಭವಾಗಿ ಜ್ವರ ಸಹ ಕಾಡಿತಂತೆ ಆದರೂ ಬಿಡದೆ ಸಿನಿಮಾಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಾರೆ. ಈ ವಿಷಯವನ್ನು ಸಿನಿಮಾದ ಪ್ರಚಾರ ಸಂದರ್ಭದಲ್ಲಿ ನಟ ನರೇಶ್ ಹೇಳಿಕೊಂಡಿದ್ದು, ಆದರೆ ಇದಕ್ಕೆ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.