11ನೇ ವಯಸ್ಸಿಗೆ ಆರಾಧ್ಯಾ ರೈ ಬಚ್ಚನ್ ಕೋರ್ಟ್ ಮೆಟ್ಟಿಲೇರಿದೇಕೆ?
11ನೇ ವಯಸ್ಸಿಗೆ ಕೋರ್ಟ್ ಮೇಟ್ಟಿಲೇರಿದ ಐಶ್ವರ್ಯಾ ಪುತ್ರಿ
ಆರಾಧ್ಯಾ ಬಚ್ಚನ್ ಕೋರ್ಟ್ ಮೆಟ್ಟಿಲೇರಿದ್ದೇಕೆ ಗೊತ್ತಾ..?
ಅಮಿತಾಬ್ ಮೊಮ್ಮಗಳಿಗೆ ಅನ್ಯಾಯ ಮಾಡಿದ್ಯಾರು..?
ಬಿಟೌನ್‌ನ ಸ್ಟಾರ್ಸ್ ಕಿಡ್ಸ್‌ಗಳಲ್ಲೇ ಈಗ ಅತಿ ಹೆಚ್ಚು ಸುದ್ದಿ ಮಾಡುತ್ತಿರೋದು ವಿಶ್ವ ಸುಂದರಿ ಐಶ್ವರ್ಯ ರೈ ಹಾಗು ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್. ಅಪ್ಪ, ಅಮ್ಮ, ತಾತ ಅಮಿತಾಬ್ ಬಚ್ಚನ್‌ನ ಪ್ರೀತಿಯಲ್ಲಿ ಬೆಳೆಯುತ್ತಿರುವ ಆರಾಧ್ಯ ಬಚ್ಚನ್‌ಗೆ ಈಗ 11 ವರ್ಷ ವಯಸ್ಸು. ಈ ವಯಸ್ಸಿಗೆ ಆರಾಧ್ಯಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೌದು ಅವರಿಗೆ ಸೋಷಿಯಲ್ ಮೀಡಿಯಾದಿಂದ ತುಂಬಾ ತೊಂದರೆ ಆಗ್ತಿದೆಯಂತೆ. ಆಕೆ ಹೆಸರಿನಲ್ಲಿ ಕೆಲವೊಂದು ಪೇಜ್‌ಗಳು ಹಾಗೂ ಯೂಟ್ಯೂಬ್ ಚಾನೆಲ್‌ಗಳು ವೀವ್ಸ್ ಗಿಟ್ಟಿಸಿಕೊಳ್ಳಲು ಕೆಟ್ಟ ಸುದ್ದಿಗಳನ್ನ ಪ್ರಸಾರ ಮಾಡುತ್ತಿವೆಯಂತೆ. ಹಾಗಾಗಿ ನನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದೆ. ಇದಕ್ಕೆ ತಡೆ ನೀಡಿ ಎಂದು ಐಶ್ವರ್ಯ ರೈ ಮಗಳು ಆರಾಧ್ಯ ಬಚ್ಚನ್ ದೆಹಲಿ ಹೈಕೋರ್ಟ್‌ನಲ್ಲಿ ದೂರು ನೀಡಿದ್ದಾರೆ. ಈ ಸುದ್ದಿ ಈಗ ಬಾಲಿವುಡ್ ಚಿತ್ರಜಗತ್ತಿನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ವೀಕ್ಷಿಸಿ: KGF-3 ಫ್ಯಾನ್ ಮೇಡ್ ಪೋಸ್ಟರ್ ಹರಿಬಿಟ್ಟ ರಾಕಿ ಫ್ಯಾನ್ಸ್!