ಕ್ಯಾಮರಾದಲ್ಲಿ ಸೆರೆಯಾಯ್ತು ಹಾವುಗಳ ಸರಸ ಸಲ್ಲಾಪ

ಮಿಲನ ಮಹೋತ್ಸವದಲ್ಲಿ ತೊಡಗಿದ್ದ ಎರಡು ಜೋಡಿ ಕೆರೆ ಹಾಗೂ ನಾಗರ ಹಾವುಗಳು

First Published Feb 19, 2022, 3:36 PM IST | Last Updated Feb 19, 2022, 3:36 PM IST

ಚಿಕ್ಕಮಗಳೂರು(ಫೆ.19): ಬಿಸಿಲಿಗೆ ಮೈಯೊಡ್ಡಿ ಹಾವುಗಳು ಸರಸ ಸಲ್ಲಾಪ ನಡೆಸುತ್ತಿರುವ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರು ನಗರ ಹಾಗೂ ರಂಭಾಪುರಿ ಪೀಠದ ಬಳಿ 2 ಬೇರೆ ಬೇರೆ ಸ್ಥಳದಲ್ಲಿ ನಾಲ್ಕು ಹಾವುಗಳು ಮಿಲನ ಕ್ರೀಡೆಯಲ್ಲಿ ತೊಡಗಿದ್ದವು. ತೆಕ್ಕೆ ಹಾಕಿಕೊಂಡ ಎರಡು ಕೆರೆ ಹಾವು ಹಾಗೂ ನಾಗರಹಾವುಗಳು ಸುಮಾರು 45 ನಿಮಿಷಗಳ ಕಾಲ  ಮಿಲನ ಮಹೋತ್ಸವ ನಡೆಸಿದವು. ಹಾವುಗಳ  ಸರಸವನ್ನು ನೋಡಬಾರದೆಂಬ ನಂಬಿಕೆ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಕೆಲವರು ಮೈಮೇಲಿನ ಬಟ್ಟೆ ಹರಿದು ಹಾಕಿ ಅಲ್ಲಿಂದ ಹಿಂದಿರುಗಿದ್ದಾರೆ.
 

Video Top Stories