ಗೋ ಹತ್ಯೆ ನಿಷೇಧ ಕಾಯ್ದೆ ಹಿನ್ನೆಲೆ; ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ ರೈತರು!
ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿರುವ ಕರ್ನಾಟಕ ಸರ್ಕಾರಕ್ಕೆ ಇದೀಗ ಹೊಸ ತಲೆ ನೋವು ಶುರುವಾಗಿದೆ. ಕಾರಣ ಇದೀಗ ರೈತರು ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. ಕಾಯ್ದೆ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತೆರಕಣಾಂಬಿ ಸಂತೆಯಲ್ಲಿ ವಯಸ್ಸಾದ ಹಾಗು ಗೊಡ್ಡು ಹಸುಗಳನ್ನು ಮಾರಾಟ ಮಾಡಲು ರೈತರು ಪರಾದಾಡುತ್ತಿದ್ದಾರೆ.
ಚಾಮರಾಜನಗರ(ಜ.02): ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿರುವ ಕರ್ನಾಟಕ ಸರ್ಕಾರಕ್ಕೆ ಇದೀಗ ಹೊಸ ತಲೆ ನೋವು ಶುರುವಾಗಿದೆ. ಕಾರಣ ಇದೀಗ ರೈತರು ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. ಕಾಯ್ದೆ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತೆರಕಣಾಂಬಿ ಸಂತೆಯಲ್ಲಿ ವಯಸ್ಸಾದ ಹಾಗು ಗೊಡ್ಡು ಹಸುಗಳನ್ನು ಮಾರಾಟ ಮಾಡಲು ರೈತರು ಪರಾದಾಡುತ್ತಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆ ಕಾರಣ ಗೊಡ್ಡು ಹಸುಗಳನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. 'ನಾವು ಹಸುಗಳನ್ನ ಸಾಕುವುದೇ ಲಾಭಕ್ಕಾಗಿ, ವಯಸ್ಸಾದ ಹಾಗೂ ಗೊಡ್ಡು ಹಸುಗಳನ್ನ ಸಾಕಲು ಸಾಧ್ಯವಿಲ್ಲ' . ಅವುಗಳಿಗೆ ಮೇವು ಪೂರೈಸಲು ಹಣವಿಲ್ಲ, ಅಂತಹ ಹಸುಗಳನ್ನು ಸರ್ಕಾರವೇ ಖರೀದಿಸಲಿ ಎಂದು ರೈತರ ಆಗ್ರಹಿಸಿದ್ದಾರೆ.