Asianet Suvarna News Asianet Suvarna News

Veda Krishnamurthy: ಹೆಡ್‌ಬುಷ್‌ 2 ಸಹವಾಸವೇ ಬೇಡ ಎಂದ ಕ್ರಿಕೆಟರ್ ವೇದ ಕೃಷ್ಣಮೂರ್ತಿ

ಡಾಲಿ ಧನಂಜಯ್‌ ನಟನೆಯ ‘ಹೆಡ್‌ ಬುಷ್‌’ ಚಿತ್ರವನ್ನು ಇಂಡಿಯನ್ ಕ್ರಿಕೆಟರ್‌ ವೇದ ಕೃಷ್ಣಮೂರ್ತಿ ವೀಕ್ಷಿಸಿ ಏಷ್ಯಾನೆಟ್‌ ಸುವರ್ಣ ನ್ಯೂಸ್ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದು, ಹೆಡ್‌ಬುಷ್‌ 2 ಸಹವಾಸವೇ ಬೇಡ ಎಂದಿದ್ದಾರೆ. 

First Published Oct 27, 2022, 1:10 AM IST | Last Updated Oct 27, 2022, 1:10 AM IST

ಡಾಲಿ ಧನಂಜಯ್‌ ನಟನೆಯ ‘ಹೆಡ್‌ ಬುಷ್‌’ ಸಿನಿಮಾ ಅಕ್ಟೋಬರ್‌ 21ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಬೆಂಗಳೂರಿನ ಭೂಗತ ಲೋಕದ ಡಾನ್‌ ಜಯರಾಜ್‌ ಅವರ ಜೀವ ಆಧರಿತ ಕತೆ ಎಂದು ಹೇಳಲಾಗುತ್ತಿರುವ ಈ ಚಿತ್ರವಿದು. ಅಗ್ನಿಶ್ರೀಧರ್ ಬರೆದಿರುವ 'ದಾದಾಗಿರಿಯ ದಿನಗಳು' ಪುಸ್ತಕ ಆಧಾರಿತ ಸಿನಿಮಾ ಇದಾಗಿದ್ದು ಶೂನ್ಯ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್‌ ಸಂಗೀತ ಸಿನಿ ರಸಿಕರ ಗಮನ ಸೆಳೆದಿದೆ. ಶೂನ್ಯ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕಿಯಾಗಿ ಪಾಯಲ್‌ ರಜಪೂತ್‌ ನಟಿಸಿದ್ದಾರೆ. ಡಾಲಿ ಧನಂಜಯ್‌ ಇಲ್ಲಿ ಜಯರಾಜ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಲೂಸ್ ಮಾದ ಯೋಗಿ ಗಂಗ ಅನ್ನೋ ರೌಡಿ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರವನ್ನು ಇಂಡಿಯನ್ ಕ್ರಿಕೆಟರ್‌ ವೇದ ಕೃಷ್ಣಮೂರ್ತಿ ವೀಕ್ಷಿಸಿ ಏಷ್ಯಾನೆಟ್‌ ಸುವರ್ಣ ನ್ಯೂಸ್ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದು, ಹೆಡ್‌ಬುಷ್‌ 2 ಸಹವಾಸವೇ ಬೇಡ ಎಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories