SSLC ಓದಿದವ ಇಂದು ಕೋಟಿ ವಹಿವಾಟಿನ ಒಡೆಯ!
1974ರಲ್ಲಿ ಸುಭಾಷ್ ರೆಡ್ಡಿ ಅವರ ತಂದೆ ನಾರಾಯಣ ರೆಡ್ಡಿ ಅವರು ಆರಂಭಿಸಿದ ಗ್ರಾಮಾಫೋನ್ ಸಿ.ಡಿ ವ್ಯಾಪಾರದ ವಹಿವಾಟು ಸಿಕ್ಕಾಪಟ್ಟೆಜೋರಿತ್ತು. ಅಲ್ಲಿಂದ ಶುರುವಾದ ಇವರ ಬದುಕು ನೋಡನೋಡುತ್ತಿದ್ದಂತೆ ಸಂಗೀತಾ ಮೊಬೈಲ್ಸ್ ಅನ್ನೋ ಸಂಸ್ಥೆಯ ಮೂಲಕ ಇಂದು ಉದ್ಯಮ ಕ್ಷೇತ್ರದಲ್ಲಿ ಬಾನೆತ್ತರಕ್ಕೆ ಬೆಳೆದು ನಿಂತಿದೆ.
ಬೆಂಗಳೂರು(ಏ.25): ‘ಬೇಡ ಕಣೋ.. ನೀನು ಇನ್ನೂ ಚಿಕ್ಕವನು. ಚೆನ್ನಾಗಿ ಓದಿ ಒಂದೊಳ್ಳೆ ನೌಕರಿ ಮಾಡು. ಆಮೇಲೆ ಈ ದುಡಿಮೆ ಎಲ್ಲಾ ಇದ್ದಿದ್ದೇ. ಚೆನ್ನಾಗಿ ಓದಿ ಒಳ್ಳೆ ಕೆಲಸ ಪಡೆದ್ರೆ ನೀನು ಇಂತಹ ಮೂರು, ನಾಲ್ಕು ಅಂಗಡಿಗಳನ್ನ ಮಾಡಬಹುದು. ನೀನು ಕಾಲೇಜಿಗೆ ಹೋಗು’ ಅಂತ ಹೇಳಿ ತನ್ನ ಅಪ್ಪ ಅದೆಷ್ಟೇ ಹೇಳಿದರೂ ಮಗನಿಗೆ ಅದ್ಯಾವ ಕನಸು ಕಾಡಿತ್ತೋ ಏನೋ? ಹಠಕ್ಕೆ ಬಿದ್ದವನು ಅಂದುಕೊಂಡದ್ದನ್ನ ಸಾಧಿಸುವವರೆಗೂ ಬಿಡಲೇ ಇಲ್ಲ. ಅಂದು ಅಪ್ಪನ ಒತ್ತಾಯಕ್ಕೆ ತಂದಿದ್ದ ಪಿ.ಯು.ಸಿ ಪ್ರವೇಶದ ಅರ್ಜಿಯನ್ನ ತುಂಬಿ ಕಾಲೇಜಿಗೆ ಸೇರಿದ್ರೆ ಇವತ್ತು ಸಂಗೀತಾ ಅನ್ನೋ ಸಾಮ್ರಾಜ್ಯ ಖಂಡಿತಾ ನಿರ್ಮಾಣವಾಗುತ್ತಿರಲಿಲ್ಲ. ಬದುಕಲ್ಲಿ ಗೆಲ್ಲಲೇ ಬೇಕೆಂದು ಅಪ್ಪನ ಕೈ ಹಿಡಿದಿದ್ದ 16ರ ಬಾಲಕ ಇಂದು ದೇಶದ ನಂ.1 ಕಂಪನಿಯ ಗ್ರಾಹಕರ ಸೇವಕ.
1974ರಲ್ಲಿ ಸುಭಾಷ್ ರೆಡ್ಡಿ ಅವರ ತಂದೆ ನಾರಾಯಣ ರೆಡ್ಡಿ ಅವರು ಆರಂಭಿಸಿದ ಗ್ರಾಮಾಫೋನ್ ಸಿ.ಡಿ ವ್ಯಾಪಾರದ ವಹಿವಾಟು ಸಿಕ್ಕಾಪಟ್ಟೆಜೋರಿತ್ತು. ಅಲ್ಲಿಂದ ಶುರುವಾದ ಇವರ ಬದುಕು ನೋಡನೋಡುತ್ತಿದ್ದಂತೆ ಸಂಗೀತಾ ಮೊಬೈಲ್ಸ್ ಅನ್ನೋ ಸಂಸ್ಥೆಯ ಮೂಲಕ ಇಂದು ಉದ್ಯಮ ಕ್ಷೇತ್ರದಲ್ಲಿ ಬಾನೆತ್ತರಕ್ಕೆ ಬೆಳೆದು ನಿಂತಿದೆ.
ಜೊತೆಗೆ ಅಪಾರ ಜನ ಮನ್ನಣೆಯನ್ನೂ ಗಳಿಸಿದೆ. ತಂದೆಯಂತೆಯೇ ಮಗ ಸುಭಾಷ್‌ಚಂದ್ರ ರೆಡ್ಡಿ ಅವರು ತಮ್ಮ ಕಾಯಕ ಶ್ರದ್ಧೆ ಮತ್ತು ಸತತ ಶ್ರಮದೊಂದಿಗೆ ಸಂಗೀತಾ ಮೊಬೈಲ್ಸ್ ಅನ್ನೋ ಸಾಮ್ರಾಜ್ಯ ಕಟ್ಟೋ ಮೂಲಕ ಇಡೀ ಭಾರತವೇ ತನ್ನತ್ತ ತಿರುಗಿ ನೋಡಿವಂತೆ ಮಾಡಿದ್ದಾರೆ.