ಎಸ್‌ಎಲ್‌ ಶೇಟ್‌ ಡೈಮಂಡ್‌ ಹೌಸ್‌ನ ರವೀಂದ್ರ ಶೇಟ್‌‌ಗೆ ಉಜ್ವಲ ಉದ್ಯಮಿ ಪ್ರಶಸ್ತಿ!

ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಉಜ್ವಲ ಉದ್ಯಮಿ ಪ್ರಶಸ್ತಿ ಇದೀಗ ಕರಾವಳಿಗೂ ವಿಸ್ತರಿಸಿದೆ. ಈ ಬಾರಿ ಕರಾವಳಿಯ ಉಜ್ವಲ ಉದ್ಯಮಿ ಪ್ರಶಸ್ತಿಯನ್ನು ಎಸ್‌ಎಲ್‌ ಶೇಟ್‌ ಡೈಮಂಡ್‌ ಹೌಸ್‌ನ ರವೀಂದ್ರ ಶೇಟ್‌ ಪಡೆದಿದ್ದಾರೆ. 

First Published Mar 14, 2023, 7:46 PM IST | Last Updated Mar 14, 2023, 7:46 PM IST

ಸಮಾಜದಲ್ಲಿನ ಉತ್ತಮ ಉದ್ಯಮಿಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಕಾರ್ಯ ಇದೀಗ ಮತ್ತಷ್ಟು ವಿಸ್ತರಣೆಗೊಂಡಿದೆ. ಇದೀಗ ಉಜ್ವಲ ಉದ್ಯಮಿ ಪ್ರಶಸ್ತಿ ಕರಾವಳಿ ಆವೃತ್ತಿ ಆರಂಭಗೊಂಡಿದೆ. ಕರಾವಳಿ ಭಾಗದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಅಪಾರ ಕೊಡುಗೆ ನೀಡಿದ ಎಸ್‌ ಎಲ್‌ ಶೇಟ್‌ ಡೈಮಂಡ್‌ ಹೌಸ್‌ ಮಾಲೀಕರದಾ ರವೀಂದ್ರ ಶೇಟ್ ಈ ಬಾರಿ ಉಜ್ವಲ ಉದ್ಯಮಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 1947ರಲ್ಲಿ ಆರಂಭಗೊಂಡ ಈ ಎಸ್‌ಎಲ್ ಶೇಟ್ ಡೈಮಂಡ್ ಹೌಸ್ ಸ್ವಾತಂತ್ರ್ಯ ನಂತ್ರ ಕರಾವಳಿಯಲ್ಲಿ ಉದ್ಯೋಗ ಅವಕಾಶದ ಜೊತೆಗೆ, ಆರ್ಥಿಕ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದೆ.