Asianet Suvarna News Asianet Suvarna News

Weekend Curfew : ಉದ್ಯಮಿಗಳಿಂದ ನಾಳೆ ಆರೋಗ್ಯ ಸಚಿವರ ಭೇಟಿ

ಉದ್ಯಮಿಗಳಿಂದ ನಾಳೆ ಆರೋಗ್ಯಸಚಿವರ ಭೇಟಿ
ವೀಕೆಂಡ್ ಕರ್ಫ್ಯೂ ರದ್ದು ಮಾಡುವಂತೆ ಮನವಿ
ಆರ್ಥಿಕವಾಗಿ ಈಗಾಗಲೇ ಸಂಕಷ್ಟದಲ್ಲಿರುವ ಉದ್ಯಮಿಗಳು

ಬೆಂಗಳೂರು (ಜ. 18): ಕರೋನಾ (Corona) ಕಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸಿರುವ ಸಣ್ಣ ಹಾಗೂ ಮಧ್ಯಮವರ್ಗದ ಉದ್ಯಮಿಗಳು ಬುಧವಾರ ರಾಜ್ಯ ಆರೋಗ್ಯ ಸಚಿವ (Health Minister ) ಕೆ. ಸುಧಾಕರ್  (K Sudhakar) ಅವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವಂತೆ ಉದ್ಯಮಿಗಳು ಮನವಿ ಮಾಡಲಿದ್ದು, ಉಳಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿದ್ದೇವೆ ಎಂದು ತಿಳಿಸಲಿದ್ದಾರೆ.

Weekend Curfew: 'ಮುಂದುವರೆದರೆ ಬಾರ್ & ವೈನ್ ಶಾಪ್ ಮಾಲೀಕರು ವೆಂಟಿಲೇಟರ್‌ಗೆ ಹೋಗ್ತಾರೆ'
ಹೋಟೆಲ್ ಮಾಲೀಕರು(Hotel), ಬಾರ್ ಮಾಲೀಕರು(Bar), ಜಿಮ್ (GYM), ಕಲ್ಯಾಣಮಂಟಪ (Kalyana Mantapa), ಥಿಯೇಟರ್ (Theatre) ಮಾಲೀಕರು, ಪಬ್ (Pub)ಅಸೋಸಿಯೇಷನ್ ನವರು ಈ ತಂಡದಲ್ಲಿ ಇರಲಿದ್ದಾರೆ. ಪ್ರಸ್ತುತ ಇರುವ ಕೋವಿಡ್ ನಿಯಮಾಳಿಗಳೆಲ್ಲವೂ ಇರಲಿ. ಆದರೆ, ವೀಕೆಂಡ್ ಕರ್ಫ್ಯೂ ರದ್ದು ಮಾಡಿ, ನೈಟ್ ಕರ್ಫ್ಯೂ ಅವಧಿ ಕಡಿಮೆ ಮಾಡಿ. ಉಳಿದಂತೆ 50-50 ನಿಯಮಗಳು, ಸಾಮಾಜಿಕ ಅಂತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಿದ್ದೇವೆ ಎಂದು ಮನವರಿಕೆ ಮಾಡಿಕೊಡಲಿದ್ದಾರೆ. ಈಗಾಗಲೇ ಸಾಕಷ್ಟು ಸಾಲ ಮಾಡಿ ಉದ್ಯಮ ಆರಂಭಿಸಿದ್ದೇವೆ. ಇದೇ ಪರಿಸ್ಥಿತಿ ಕೆಲ ದಿನ ಮುಂದುವರಿದಲ್ಲಿ ಬೀದಿಗೆ ಬರಬೇಕಾಗುತ್ತದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

Video Top Stories