ಭಾರತದ ಭಂಡಾರದಲ್ಲಿ ಈಗ 790 ಟನ್ ಬಂಗಾರ... 3 ವರ್ಷದಲ್ಲಿ ಬದಲಾಗಿದ್ದು ಹೇಗೆ ಭಾರತದ ಭವಿಷ್ಯ?

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನ ಖರೀದಿಗೆ ಮುಂದಾಗಿವೆ. ರಿಸರ್ವ್‌ ಬ್ಯಾಂಕ್‌ ಕೂಡ ಬಂಗಾರ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದು, ಕಳೆದ 3 ವರ್ಷದಲ್ಲಿ 179 ಟನ್‌ ಚಿನ್ನವನ್ನು ಖರೀದಿಸಿದೆ.

First Published Apr 29, 2023, 10:31 AM IST | Last Updated Apr 29, 2023, 10:31 AM IST

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನ ಖರೀದಿಗೆ ಮುಂದಾಗಿವೆ. ರಿಸರ್ವ್‌ ಬ್ಯಾಂಕ್‌ ಕೂಡ ಬಂಗಾರ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದು, ಕಳೆದ 3 ವರ್ಷದಲ್ಲಿ 179 ಟನ್‌ ಚಿನ್ನವನ್ನು ಖರೀದಿಸಿದೆ.ಮಾರ್ಚ್ 2020 ಮತ್ತು ಮಾರ್ಚ್ 2023ರ ನಡುವೆ, ಆರ್‌ಬಿಐ 137.19 ಟನ್‌ ಚಿನ್ನವನ್ನು ಖರೀದಿಸಿದೆ. ಕೇವಲ 3 ವರ್ಷಗಳಲ್ಲಿ ಆರ್‌ಬಿಐ ಚಿನ್ನದ ಸಂಗ್ರಹದಲ್ಲಿ ಶೇ. 79ರಷ್ಟು ಏರಿಕೆಯಾಗಿದೆ. ಇತ್ತೀಚಿನ ವರ್ಷಗಳ ಖರೀದಿ ಬಳಿಕ, ಪ್ರಸ್ತುತ ಆರ್‌ಬಿಐನಲ್ಲಿನ ಚಿನ್ನದ ಮೀಸಲು ಸಂಗ್ರಹ 790 ಟನ್‌ಗಳಿಗೆ ಏರಿಕೆ ಆಗಿದೆ.   ಜಗತ್ತಿನ ಬಹುತೇಕ ರಾಷ್ಟ್ರಗಳು, ಕೊರೊನಾ-ಲಾಕ್ ಡೌನ್- ರಷ್ಯಾ ಉಕ್ರೇನ್ ಯುದ್ಧ, ಅಮೆರಿಕಾ ಚೀನಾ ಶೀತಲ ಸಮರ ಹೀಗೆ ನಾನಾ ಕಾರಣಗಳಿಗೆ ಸಿಲುಕಿ ವಿಲವಿಲ ಒದ್ದಾಡುತ್ತಾ ಇದ್ದಿತ್ತು. ಆದರೆ ಕೋವಿಡ್‌ ಬಿಕ್ಕಟ್ಟಿನ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿದಿತ್ತು. ನಂತರವೂ ಅನಿಶ್ಚಿತತೆ ಮುಂದುವರಿದಿದೆ. ಈ ಅವಧಿಯಲ್ಲಿ ಚಿನ್ನದ ಮೀಸಲು ಹೆಚ್ಚಿಸಿಕೊಳ್ಳಲು ಆರ್‌ಬಿಐ ಮುಂದಾಗಿದೆ.

Video Top Stories