Asianet Suvarna News Asianet Suvarna News

ನೆರವಿನ ನಿರೀಕ್ಷೆಯಲ್ಲಿ ಖಾಸಗಿ ಸಾರಿಗೆ ಉದ್ಯಮ!

ಕಾಡಿನಂತೆ ಬೆಳೆದಿರುವ ಗಿಡಗಂಟಿಗಳ ನಡುವೆ ಮುಚ್ಚಿ ಹೋಗಿರುವ ಈ ಬಸ್ಸನ್ನೊಮ್ಮೆ ನೋಡಿ, ಎರಡು ವರ್ಷಗಳಾಯ್ತು! ಈ ಬಸ್ ಇಟ್ಟಲ್ಲೇ ಇಟ್ಟು ತುಕ್ಕು ಹಿಡಿಯುತ್ತಿದೆ. ಸಾವಿರಾರು ಜನರನ್ನು ಬಲಿ ಪಡೆದ ಕೊರೋನಾ ಇಂತಹಾ ನೂರಾರು ನಿರ್ಜೀವ ಬಸ್‌ಗಳ ಸಂಚಾರಕ್ಕೂ ಅಂತ್ಯಹಾಡಿದೆ.

ಮಂಗಳೂರು(ಆ.29): ಕಾಡಿನಂತೆ ಬೆಳೆದಿರುವ ಗಿಡಗಂಟಿಗಳ ನಡುವೆ ಮುಚ್ಚಿ ಹೋಗಿರುವ ಈ ಬಸ್ಸನ್ನೊಮ್ಮೆ ನೋಡಿ, ಎರಡು ವರ್ಷಗಳಾಯ್ತು! ಈ ಬಸ್ ಇಟ್ಟಲ್ಲೇ ಇಟ್ಟು ತುಕ್ಕು ಹಿಡಿಯುತ್ತಿದೆ. ಸಾವಿರಾರು ಜನರನ್ನು ಬಲಿ ಪಡೆದ ಕೊರೋನಾ ಇಂತಹಾ ನೂರಾರು ನಿರ್ಜೀವ ಬಸ್‌ಗಳ ಸಂಚಾರಕ್ಕೂ ಅಂತ್ಯಹಾಡಿದೆ.

ಹೌದು, ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಏನಿಲ್ಲ ಅಂದ್ರೂ ಸುಮಾರು 3500 ಖಾಸಗಿ ಬಸ್‌ಗಳಿವೆ. ಬರ ಸಿಡಿಲಿನಂತೆ ಎರಗಿದ ಕೊರೋನಾ ಮೊದಲನೇ ಅಲೆಯಲ್ಲಿ ಕುಸಿದು ಬಿಟ್ಟಿದ್ದ ಖಾಸಗಿ ವಲಯ, ಎರಡನೇ ಅಲೆ ಬಂದ ನಂತರವಂತೂ ಉಸಿರೇ ನಿಲ್ಲಿಸಿಬಿಟ್ಟಿದೆ. ಸಾವಿರಾರು ಬಸ್‌ಗಳು ತೆರಿಗೆ ಕಟ್ಟಲು ಸಾಧ್ಯವಾಗದೆ, ಪರ್ಮೀಟ್‌ಗಳನ್ನು ಸಾರಿಗೆ ಇಲಾಖೆಗೆ ಸರಂಡರ್ ಮಾಡಿವೆ. ನಗರದ ಯಾವ ಮೂಲೆಗೆ ಹೋದರೂ ಪಳೆಯುಳಿಕೆಗಳಂತೆ ಕಾಣುವ ಈ ಬಸ್ ಗಳು ಕಣ್ಣೀರ ಕಥೆ ಹೇಳುತ್ತಿವೆ.

Video Top Stories