ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತಾ ಪೆಟ್ರೋಲ್, ಡೀಸೆಲ್ ರೇಟು.? ನಿರ್ಮಲಕ್ಕನ ಲೆಕ್ಕಾಚಾರವಿದು!
Feb 22, 2021, 1:02 PM IST
ಬೆಂಗಳೂರು (ಫೆ. 22): ಪೆಟ್ರೋಲ್ ಬೆಲೆ 100 ರ ಗಡಿ ದಾಟುತ್ತಿರುವುದು, ಡಿಸೇಲ್ ಬೆಲೆ ಏರಿಕೆಯಾಗುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ದಿನೇ ದಿನೇ ತೈಲ ಬೆಲೆ ಏರಿಕೆಯಾಗುತ್ತಿರುವುದು ವಾಹನ ಸವಾರರ ಜೇಬಿಗೆ ಬರೆ ಎಳೆದಂತಾಗಿದೆ. ಸಾಕಷ್ಟು ಚರ್ಚೆ, ಆಕ್ರೋಶದ ನಂತರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೌನ ಮುರಿದಿದ್ದಾರೆ.
ಸಿಎಂ, ಇಬ್ಬರು ಡಿಸಿಎಂ, 10 ಮಿನಿಸ್ಟರ್ ಇದ್ರೂ ಈ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿಲ್ಲ, BIG 3 ಬಿಡಲ್ಲ!
‘ತೈಲ ಬೆಲೆ ಏರಿಕೆ ಎಂಬುದು ಎಲ್ಲರಿಗೂ ಅತ್ಯಂತ ಕೋಪ ತರಿಸುವ ವಿಷಯ. ದರ ಇಳಿಕೆ ಮಾಡದ ಹೊರತು ಇದಕ್ಕೆ ಬೇರೆ ಉತ್ತರವಿಲ್ಲ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಂದೆಡೆ ಕುಳಿತು ಚರ್ಚಿಸಬೇಕು. ಪೆಟ್ರೋಲ್-ಡೀಸೆಲ್ನ ಮೂಲದರ ಕಡಿಮೆ ಇದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೂಲಬೆಲೆಯ ಸುಮಾರು 2ರಷ್ಟುಸುಂಕ/ತೆರಿಗೆ ಹೇರುತ್ತವೆ. ಇದೇ ದರ ಏರಿಕೆಗೆ ಇನ್ನೊಂದು ಕಾರಣವಾಗಿದೆ ಎಂದಿರುವುದು ನಿರ್ಮಲಾ ಹೇಳಿಕೆಗೆ ಮಹತ್ವ ಬಂದಿದೆ.