Asianet Suvarna News Asianet Suvarna News

Karnataka Budge 2022: ಕರ್ನಾಟಕ ಬಜೆಟ್ ಪ್ರಮುಖ ಹೈಲೈಟ್ಸ್‌ಗಳು

ಚೊಚ್ಚಲ ಬಜೆಟ್ ಮಂಡಿಸಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು  2022-23ನೇ ಸಾಲಿಗೆ ₹2,65720 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. 

ಬೆಂಗಳೂರು:ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ 2022-23ನೇ ಸಾಲಿಗೆ ₹2,65720 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಒಟ್ಟು ಸ್ವೀಕೃತಿ 2,61,972 ಕೋಟಿ ರೂ., ರಾಜಸ್ವ ಸ್ವೀಕೃತಿ ₹1,89,888 ಕೋಟಿ , ಸಾರ್ವಜನಿಕ ಸಾಲ ₹72000 ಕೋಟಿ.  ಸೇರಿದಂತೆ ಬಂಡವಾಳ ಸ್ವೀಕೃತಿ ₹72,009 ಕೋಟಿ ಅಂದಾಜಿಸಿದ್ದಾರೆ. 
ಬೊಮ್ಮಾಯಿ ಬಜೆಟ್ ನಲ್ಲಿ ಪ್ರಮುಖ ವಲಯಗಳಿಗೆ ಮೀಸಲಿಡಲಾದ ಬಜೆಟ್ ವಿವರ ಇಂತಿದೆ
ಕೃಷಿ ಚಟುವಟಿಕೆಗಳಿಗೆ: ₹ 33,700 ಕೋಟಿ
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ: ₹68,479 ಕೋಟಿ  .
ಆರ್ಥಿಕ ಅಭಿವೃದ್ಧಿಗೆ ಉತ್ತೇಜನ: ₹ 55,657 ಕೋಟಿ
ಬೆಂಗಳೂರು ಸಮಗ್ರ ಅಭಿವೃದ್ಧಿಗೆ:₹ 8,409 ಕೋಟಿ
ಸಂಸ್ಕೃತಿ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ: ₹3102 ಕೋಟಿ
ಆಡಳಿತ ಸುಧಾರಣೆ & ಸಾರ್ವಜನಿಕ ಸೇವೆ: ₹56,710 ಕೋಟಿ 
ಮಹಿಳಾ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿ: ₹43,188 ಕೋಟಿ
ಮಕ್ಕಳ ಆಯವ್ಯಯಕ್ಕೆ ಅನುದಾನ: ₹40,944 ಕೋಟಿ
ಎಸ್​ಸಿಎಸ್​ಪಿ/ಟಿಎಸ್​ಪಿಗೆ ₹ 28,234 ಕೋಟಿ
ಆರೋಗ್ಯ, ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಜನಪರಕಲ್ಯಾಣ: ₹6,329ಕೋಟಿ 

Video Top Stories