Asianet Suvarna News Asianet Suvarna News

ಒಂದೇ ವರ್ಷದಲ್ಲಿ 4.8 ಲಕ್ಷ ಕೋಟಿ ಎಫ್‌ಡಿಐ, ಬದಲಾಗುತ್ತಿದೆ ಭಾರತ..!

- 2020 ರಲ್ಲಿ 4.8 ಲಕ್ಷ ಕೋಟಿ ಎಫ್‌ಡಿಐ!

- ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆಯಾದ ದೇಶಗಳಲ್ಲಿ ಭಾರತ ನಂ.5

- 2019 ಕ್ಕೆ ಹೋಲಿಸಿದರೆ 2020 ರಲ್ಲಿ ಎಫ್‌ಡಿಕೆ ಪ್ರಮಾಣ ಶೇ.27ರಷ್ಟುಏರಿಕೆ

 

ಬೆಂಗಳೂರು (ಜೂ. 22): ವಿಶ್ವದ ಹೊಸ ಆರ್ಥಿಕ ಶಕ್ತಿಯಾಗುವತ್ತ ದಾಪುಗಾಲುಡುತ್ತಿರುವ ಭಾರತದಲ್ಲಿ 2020ನೇ ಸಾಲಿನಲ್ಲಿ 64 ಶತಕೋಟಿ ಡಾಲರ್‌ (ಅಂದಾಜು 4.80 ಲಕ್ಷ ಕೋಟಿ ರು.) ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ. ಈ ಮೂಲಕ ಅತಿ ಹೆಚ್ಚು ಎಫ್‌ಡಿಐ ಸ್ವೀಕರಿಸಿದ ದೇಶಗಳ ಪೈಕಿ ಭಾರತ ವಿಶ್ವದಲ್ಲೇ ನಂ.5 ಸ್ಥಾನಕ್ಕೇರಿದೆ ಎಂದು ವರದಿಯೊಂದು ತಿಳಿಸಿದೆ.

ಪಿಎಫ್ ನಿಯಮಗಳಲ್ಲಿ ಬದಲಾವಣೆ: ಹೀಗ್ಮಾಡದಿದ್ರೆ EPF ಹಣಕ್ಕೆ ಕತ್ತರಿ!

ಭಾರತದಲ್ಲಿ 2019ರಲ್ಲಿ 3.82 ಲಕ್ಷ ಕೋಟಿ ರು.ನಷ್ಟಿದ್ದ ಎಫ್‌ಡಿಐ, 2020ರಲ್ಲಿ 4.80 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಇದು ಶೇ.27ರಷ್ಟುಹೆಚ್ಚಳ. ಒಟ್ಟಾರೆ ಎಫ್‌ಐಡಿ ಹೂಡಿಕೆ ಪಟ್ಟಿಯಲ್ಲಿ ಭಾರತ ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ. ಹಾಗಾದರೆ ಮೋದಿ ಅಭಿವೃದ್ಧಿಯ ಯೋಜನೆಗಳ ಫಲಿತಾಂಶವಾ ಇದು..? ಏಕಾಏಕಿ ಎಫ್‌ಡಿಐ ಏರಿಕೆಗೆ ಕಾರಣವೇನು..? 

Video Top Stories