ವಿಶ್ವ ಜಾಗತಿಕ ತಾಂತ್ರಿಕ ಶೃಂಗಸಭೆ, ಡಿಸೆಂಬರ್ 4 ರಿಂದ 6ರವರೆಗೆ ಭವಿಷ್ಯದ ತಂತ್ರಜ್ಞಾನದ ಚರ್ಚೆ!
ಗ್ಲೋಬಲ್ ಟೆಕ್ ಸಮ್ಮಿಟ್‌ಗೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 4 ರಿಂದ 6ರ ವರೆಗೆ ನಡೆಯಲಿರುವ ಈ ತಾಂತ್ರಿಕ ಶೃಂಗಸಭೆಯಲ್ಲಿ ಹಲವು ವಿಶೇಷತೆಗಳಿವೆ. ಸಭೆ, ಸಂವಾದ, ಪ್ರಶ್ನೋತ್ತರ, ಆವಿಷ್ಕಾರ, ಭವಿಷ್ಯದ ತಂತ್ರಜ್ಞಾನ ಕುರಿತು ಚರ್ಚೆಗಳು ನಡೆಯಲಿದೆ.
ಡಿಸೆಂಬರ್ 4-6ರವರೆಗೆ ವಿಶ್ವ ಜಾಗತಿಕ ತಾಂತ್ರಿಕ ಶೃಂಗ ಸಭೆಯನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಶೃಂಗಸಭೆಯಲ್ಲಿ ಡಿಪಿಎಸ್ ಮುಖೇನ ಜಾಗತಿಕ ಸಂವಾದ, ಕೃತಕ ಬುದ್ಧಮತ್ತೆ, ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳು, ತಜ್ಞರ ಹಿಡಿತ, ಬಾಹ್ಯಾಕಾಶ ಮತ್ತು ಭವಿಷ್ಯದ ತಂತ್ರಜ್ಞಾನದ ಬಗ್ಗೆ ಚರ್ಚೆಗಳಾಗಲಿವೆ. 20ಕ್ಕೂ ಹೆಚ್ಚು ಸಂವಾದಗಳು ನಡೆಯಲಿದೆ. 100ಕ್ಕೂ ಹೆಚ್ಚು ತಜ್ಞರು ಸವಾಲುಗಳಿಗೆ ಉತ್ತರ ನೀಡಲಿದ್ದಾರೆ.