ಮಾಲಿನ್ಯ ತಡೆಗಟ್ಟಲು ಪ್ರಸಿದ್ಧ ಫ್ಯಾಷನ್ ಬ್ರಾಂಡ್ ಕಂಪನಿಯ ವಿನೂತನ ಹೆಜ್ಜೆ!

ಹವಾಮಾನ ವೈಪರೀತ್ಯ ಜನರನ್ನು ಕಂಗೆಡಿಸಿದೆ. ಪ್ರಕೃತಿಯಲ್ಲಿ ಕಂಡು ಬರುತ್ತಿರುವ ಈ ಸಮಸ್ಯೆಗಳಿಗೆ ಫ್ಯಾಷನ್ ಇಂಡಸ್ಟ್ರಿ ಪಾತ್ರ ಬಹುದೊಡ್ಡದು. ಹೀಗಿರುವಾಗ ಈ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಒಂದು ಉಡುಪುಗಳ ಬಾಡಿಗೆ ಸೇವೆ ಆರಂಭಿಸಲು ಸಜ್ಜಾಗಿದೆ.

First Published Dec 7, 2019, 3:01 PM IST | Last Updated Dec 7, 2019, 3:17 PM IST

ಸ್ವೀಡಿಶ್ ನ ಪ್ರಸಿದ್ಧ ಕಂಪನಿ ಎಚ್ ಆ್ಯಂಡ್ ಎಂ ಪರಿಸರ ಮಾಲಿನ್ಯ ಹಾಗೂ ಹಾನಿ ತಡೆಯುವ ನಿಟ್ಟಿನಲ್ಲಿ ಉಡುಪುಗಳನ್ನು ಬಾಡಿಗೆಗೆ ನೀಡುವ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ. ಬನಾನಾ ರಿಪಬ್ಲಿಕ್ ಹಾಗೂ ಅರ್ಬನ್ ಔಟ್ ಫಿಟ್ಟರ್ಸ್ ಕಂಪನಿಗಳು ಇಂತಹ ಈ ವರ್ಷದ ಆರಂಭದಲ್ಲಿ ಇಂತಹ ಸೇವೆಯನ್ನಾರಂಭಿಸಿದ್ದವು. ಇದರ ಬೆನ್ನಲ್ಲೇ ಫ್ಯಾಷನ್ ಕ್ಷೇತ್ರದ ದಿಗ್ಗಜ ಕಂಪನಿ ಎಚ್ ಆ್ಯಂಡ್ ಎಂ ಕೂಡಾ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಎಚ್ ಆ್ಯಂಡ್ ಎಂ ಕಂಪನಿ ಆರಂಭಿಸಿರುವ ಈ ಬಾಡಿಗೆ ಬಟ್ಟೆಗಳ ಸೇವೆ ಸದ್ಯ ಸ್ವೀಡನ್ ರಾಜಧಾನಿ ಸ್ಟಾಕ್ ಹೋಂನಲ್ಲಿರುವ ಮಳಿಗೆಯಲ್ಲಷ್ಟೇ ಲಭ್ಯವಿದ್ದು, ಆರಂಭದಲ್ಲಿ ಕೇವಲ 50 ಬಟ್ಟೆಗಳನ್ನಷ್ಟೇ ಬಾಡಿಗೆಗೆ ಇಡಲಾಗಿದೆ. ಇವುಗಳನ್ನು ಕಂಪೆನಿಯ ನಿಷ್ಟಾವಂತ ಸದಸ್ಯರಿಗಷ್ಟೇ ನೀಡಲಾಗುತ್ತಿದೆ. ಈ ಯೋಜನೆಯನ್ನು ತನ್ನೆಲ್ಲಾ ಶಾಖೆಗಳಿಗೂ ವಿಸ್ತರಿಸುವ ಮುನ್ನ, ಕಂಪೆನಿಯು ಮೂರು ತಿಂಗಳ ಕಾಲ ತನ್ನ ಸೇವೆಯಿಂದ ಉಪಯೋಗವಾಗುತ್ತದೆಯೇ ಎಂಬುವುದನ್ನು ಅವಲೋಕಿಸಲಿದೆ. ಇವೆಲ್ಲವನ್ನು ಹೊರತುಪಡಿಸಿ ಕಂಪೆನಿಯು ಬಟ್ಟೆಗಳ ಹೊಲಿಗೆ ಸೌಲಭ್ಯ, ಕಾಫೀ ಶಾಪ್ ಹಾಗೂ ಬ್ಯೂಟಿ ಬಾರ್ ವ್ಯವಸ್ಥೆಯನ್ನೂ ಮಾಡಲಿದೆ.

Video Top Stories